Sunday, May 20, 2012

ಕಠಾರಿವೀರಕ್ಕೆ ಮುಂದುವರಿದ ಕಂಟಕದ ಸರಮಾಲೆ




ಕಠಾರಿವೀರ ಸುರಸುಂದರಾಂಗಿ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಮಠಗಳ ಮುನಿವರ್ಯರು ಈ ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಚಿತ್ರಸಿರುವ ರೀತಿ ಹಾಗೂ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳನ್ನು ಚಿತ್ರದಿಂದ ತೆಗೆದುಹಾಕಿ ಪ್ರದರ್ಶನ ಮುಂದುವರಿಸುವಂತೆ ಹೇರುತ್ತಿರುವ ಒತ್ತಡ ಹಾಗೇ ಮುಂದುವರಿದಿದೆ. ಚಿತ್ರದ ಪ್ರದರ್ಶನವೂ ಮುಂದುವರಿದಿದೆ.

ಚಿತ್ರದಲ್ಲಿರುವ ಯಾವುದೇ ದೃಶ್ಯಗಳಿಗೆ ಕತ್ತರಿ ಪ್ರಯೋಗದ ಅಗತ್ಯವಿಲ್ಲ ಎಂದು ಕೋರ್ಟ್ ಆದೇಶ ನೀಡಿದ ಮೇಲೂ ಸ್ವಾಮೀಜಿಗಳ ಆರೋಪ ಮುಂದುವರಿದಿದೆ. ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ವಾದ-ವಿವಾದಗಳು ಮುಂದುವರಿದಿವೆ. ಈ ನಡುವೆ, ಉಪೇಂದ್ರ ಹಾಗೂ ನಿರ್ಮಾಪಕ ಮುನಿರತ್ನ ಅವರು ಶಿರೂರು ಸ್ವಾಮಿಗಳ ಕ್ಷಮೆ ಕೇಳಿದ್ದು ಹಾಗೂ ಆಕ್ಷೇಪಾರ್ಹ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕುವುದಾಗಿ ಭರವಸೆ ನೀಡಿದ್ದೂ ನಡೆದಿದೆ.

ಒಟ್ಟಿನಲ್ಲಿ, ಕಠಾರಿವೀರ ಚಿತ್ರ ಬಿಡುಗಡೆಯದ ನಂತರ ಒಂದಲ್ಲ ಮತ್ತೊಂದು ವಿವಾದಗಳು ಚಿತ್ರದ ಸುತ್ತ ಸುತ್ತುತ್ತಲೇ ಇವೆ. ಹಿಂದೂ ಸಂಘಟನೆಗಳು ವಿವಾದವನ್ನು ದೊಡ್ಡದಾಗಿ ಬಿಂಬಿಸುವುದನ್ನು ಮುಂದುವರಿಸುತ್ತಲೇ ಇವೆ. ನಿರ್ಮಾಪಕ ಮುನಿರತ್ನ ಅವರು ಕೋರ್ಟ ಆದೇಶ, ಸೆನ್ಸಾರ್ ಮಂಡಳಿ ನಿಯಮಗಳು ಹಾಗೂ ಹಿಂದು ಸಂಘಟನೆಗಳ ಆಕ್ರೋಶಗಳ ಮಧ್ಯೆ ತಮ್ಮ ವಿವಾದಾತ್ಮಕ ಚಿತ್ರದ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಮುಂದೇನಾಗುವುದೋ...!

No comments:

Post a Comment