ಯುವ ನಟ ಹಾಗೂ ಲೇಖಕ ನಿರಂಜನ್ ಶೆಟ್ಟಿ ಎಂಬುವವರು ಕಠಾರಿವೀರ ಸುರಸುಂದರಾಂಗಿ ಚಿತ್ರದ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಮುನಿರತ್ನ ತಾವು ಬಹಿರಂಗ ಚರ್ಚೆಗೆ ಈಗಲೇ ಸಿದ್ಧನಿದ್ದೇನೆ ಎಂದಿದ್ದಾರೆ.
ಕಠಾರಿವೀರ ಚಿತ್ರ ಶೇಕಡ ನೂರಕ್ಕೆ ನೂರರಷ್ಟು ನನ್ನದು. ಇನ್ನೊಬ್ಬರ ಕತೆ ಕದ್ದು ಸಿನಿಮಾ ಮಾಡುವ ದುರ್ಗತಿ ನನಗೆ ಬಂದಿಲ್ಲ. ನ್ಯಾಯಾಲಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ. ನಿರಂಜನ್ ಶೆಟ್ಟಿ ಎಂಬುವವರ ಹೆಸರನ್ನು ನಾನು ಇದೇ ಮೊದಲು ಕೇಳುತ್ತಿರುವುದು. ಅವರ ಮುಖ ಕೂಡ ನೋಡಿಲ್ಲ ಎಂದಿದ್ದಾರೆ.
ಅವರು ನ್ಯಾಯಾಲಯದ ಮೆಟ್ಟಿಲೇರಿರುವುದು ತುಂಬ ಸಂತೋಷ. ಈ ಕತೆ ಅವರದೇ ಎಂದು ಸಾಬೀತಾದರೆ ಸ್ಥಳದಲ್ಲೇ ಒಂದೇ ಒಂದು ಸೆಕೆಂಡು ತಡ ಮಾಡದೆ ಕಠಾರಿವೆರ ಚಿತ್ರವನ್ನು ಅವರಿಗೆ ಒಪ್ಪಿಸುತ್ತೇನೆ ಎಂಬ ಸವಾಲನ್ನೂ ಮುನಿರತ್ನ ಹಾಕಿದ್ದಾರೆ. ಅವರು ಇಷ್ಟು ದಿನ ಸುಮ್ಮನಿದ್ದು ಈಗ್ಯಾಕೆ ಆರೋಪ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಉಪೇಂದ್ರ ಅವರಿಗೆ ನಿರಂಜನ್ 2006ರಲ್ಲಿ ಕತೆ ಹೇಳಿದ್ದಾರಂತೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಉಪೇಂದ್ರ ಅವರಿಗೆ ದಿನಕ್ಕೆ ನೂರು ಜನ ಕತೆ ಹೇಳ್ತಾರೆ. ಅದೇ ರೀತಿ ಇವರೂ ಕತೆ ಹೇಳಿರಬಹುದು. 2006ರಿಂದ ಬಂದಂತಹ ಯಮಲೋಕದ ಕತೆಗಳೆಲ್ಲಾ ಬಹುಶಃ ಇವರೇ ಬರೆದಿರಬಹುದು ಎಂದು ಲೇವಡಿ ಮಾಡಿರುವ ಮುನಿರತ್ನ, ಇಷ್ಟಕ್ಕೂ ಇವರು ತಮ್ಮ ಕತೆಯನ್ನು ಚೆನ್ನೈನಲ್ಲಿ ಯಾಕೆ ರಿಜಿಸ್ಟರ್ ಮಾಡಿಸಿಕೊಂಡರು ಎಂದು ಪ್ರಶ್ನಿಸಿದ್ದಾರೆ. ವಿವಾದ ಈಗಷ್ಟೇ ಶುರುವಾಗಿದೆ..
No comments:
Post a Comment