Saturday, May 5, 2012

ಕಠಾರಿವೀರ ಚಿತ್ರದ ಮೇಲೆ ಕೃತಿಚೌರ್ಯ ಆರೋಪ

ಉಪೇಂದ್ರ ಹಾಗೂ ರಮ್ಯಾ ಅಭಿನಯದ ಅದ್ದೂರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಮೇ 10ಕ್ಕೆ ತೆರೆಕಾಣುತ್ತಿದೆ. ಅಷ್ಟರಲ್ಲಾಗಲೇ ಚಿತ್ರಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ತಮ್ಮ ಕತೆಯನ್ನು ಕದ್ದಿದ್ದಾರೆ ಎಂದು ಯುವ ನಟ ಹಾಗೂ ಲೇಖಕ ನಿರಂಜನ್ ಶೆಟ್ಟಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.

2006ರಲ್ಲಿ ತಾವು ಬರೆದಿದ್ದ 'ಯಮೇಂದ್ರ Vs ಉಪೇಂದ್ರ' ಕತೆಯನ್ನು ಉಪೇಂದ್ರ ಅವರಿಗೆ ಹೇಳಿದ್ದೆ. ಈಗ ಅದೇ ಕತೆಯನ್ನು ಕದ್ದು ಚಿತ್ರ ಮಾಡಿದ್ದಾರೆ. ತಮ್ಮ ಕತೆಯನ್ನು 2006ರಲ್ಲಿ ಚೆನ್ನೈನಲ್ಲಿ ರಿಜಿಸ್ಟರ್ಡ್ ಮಾಡಿದ್ದೇನೆ ಎಂದು ನಿರಂಜನ್ ಶೆಟ್ಟಿ ಆರೋಪಿಸಿದ್ದಾರೆ.

ಈ ಸಂಬಂಧ ಅವರು 47ನೇ ಸಿಸಿಎಚ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. 'ಕಠಾರಿವೀರ' ಚಿತ್ರದ ಡಬ್ಬಿಂಗ್, ರಿಪ್ರೊಡಕ್ಷನ್‌ ಹಾಗೂ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂದು ನಿರಂಜನ್ ಶೆಟ್ಟಿ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಈ ಕೇಸಿನ ವಿಚಾರಣೆಯನ್ನು ಕೋರ್ಟ್ ಮೇ 8ಕ್ಕೆ ಮುಂದೂಡಿದೆ.

No comments:

Post a Comment