ಕಠಾರಿ ವೀರ ಸುರಸುಂದರಾಂಗಿ' ಚಿತ್ರ ಮಧ್ಯರಾತ್ರಿ ಬಿಡುಗಡೆಯಂತೆ. ಇದು ಹುಚ್ಚಾಟವೋ, ದಾಖಲೆಯೋ ಗೊತ್ತಾಗುತ್ತಿಲ್ಲ. ಅಂತೂ ನಿರ್ಮಾಪಕ ಮುನಿರತ್ನ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರುವುದು ಹೌದು!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಅಣ್ಣಾ ಬಾಂಡ್' ಮಂಗಳವಾರದಂದು ಮಾಮೂಲಿ ಸಮಯಕ್ಕೇ ಬಿಡುಗಡೆಯಾಗಿತ್ತು. ಆದರೆ ಕೆಲವು ಕಡೆ ಪ್ರೇಕ್ಷಕರ ಒತ್ತಡವನ್ನು ಸಹಿಸಲಾಗದ ಥಿಯೇಟರ್ ಮಂದಿ ಮುಂಜಾನೆ ನಾಲ್ಕು ಗಂಟೆಗೇ ಶೋ ಶುರು ಮಾಡಿದ್ದಾರೆ. ಇನ್ನು ಕೆಲವು ಕಡೆ ಬೆಳಗ್ಗೆ ಆರು ಗಂಟೆಗೆ ಪ್ರದರ್ಶನ ಆರಂಭವಾಗಿತ್ತು. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲೂ ಇಂತಹ ಬೆಳವಣಿಗೆಗಳು ಕಂಡು ಬಂದಿದ್ದವು.
ಸೇರಿಗೆ ಸವ್ವಾಸೇರು ಅಂತ ಮುನಿರತ್ನ ಹೊರಟಂತೆ, ಈಗ ತನ್ನ 3D ಚಿತ್ರವನ್ನು ಮಧ್ಯರಾತ್ರಿ 12 ಗಂಟೆಗೆ ಪ್ರದರ್ಶಿಸೋದಾಗಿ ಹೇಳಿಕೊಂಡಿದ್ದಾರೆ!
ಅದ್ಧೂರಿ ಟ್ರೇಲರ್ ನೋಡಿದ್ರಾ?
ಇಂದ್ರಲೋಕದ ಅದ್ದೂರಿ ಸೆಟ್, 3ಡಿ ಮ್ಯಾಜಿಕ್‌ನ ಸುಳಿವು, ಅದ್ಭುತ ಗ್ರಾಫಿಕ್ಸ್, ರೆಬೆಲ್ ಸ್ಟಾರ್ ಅಂಬರೀಷ್ ಅಬ್ಬರ, ರಮ್ಯಾ ರಮಣೀಯತೆ, ಉಪೇಂದ್ರ ಡೈನಾಮಿಕ್ ಲುಕ್, ರಕ್ತಕಣ್ಣೀರಿನ ಮೋಹನ ಹೀಗೆ ಎಲ್ಲವನ್ನೂ ಒಂಚೂರು ಚೂರಾಗಿ ಬಡಿಸಿರುವ ವಿಭಿನ್ನ ಟ್ರೇಲರ್ ಬಿಡುಗಡೆಯಾಗಿದೆ.
ರಾಜ್ಯದಾದ್ಯಂತದ ಚಿತ್ರಮಂದಿರಗಳಲ್ಲಿ ಈಗ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ಟ್ರೇಲರುಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರೇಕ್ಷಕರಂತೂ ಎರಡು ನಿಮಿಷದ ಟ್ರೇಲರ್ ನೋಡಿಯೇ ಹುಚ್ಚೆದ್ದಿದ್ದಾರೆ. ಚಿಕ್ಕ ಟ್ರೇಲರೇ ಇಷ್ಟು ಚೆನ್ನಾಗಿರುವಾಗ, ಸಿನಿಮಾ ಎಷ್ಟು ಅದ್ಬುತವಾಗಿ ಮೂಡಿ ಬಂದಿರಬಹುದು, ಅದರಲ್ಲೂ 3ಡಿ ಕನ್ನಡಕ ಹಾಕಿದಾಗ ಹೇಗೆ ಕಾಣಬಹುದು ಎಂದೆಲ್ಲ ಆಸಕ್ತಿಯಿಂದ ಮಾತನಾಡುತ್ತಿದ್ದಾರೆ.
ನೀವು ಟ್ರೇಲರ್ ನೋಡಿಲ್ಲವೆಂದಾದರೆ, ಯೂಟ್ಯೂಬಿನಲ್ಲಿ ಇಲ್ಲಿ ಕೊಟ್ಟಂತೆ ಸರ್ಚ್ ಮಾಡಿ, ನೋಡಿ:
Click here to watch trailor
ಸಂಧಾನ ಬ್ರೇಕ್ ಆಯ್ತೇ?
ಕಠಾರಿ ವೀರ ಸುರಸುಂದರಾಂಗಿ ಮತ್ತು ಗಾಡ್‌ಫಾದರ್ ಚಿತ್ರಗಳ ಬಿಡುಗಡೆ ವಿವಾದವನ್ನು ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರಿಹಾರ ಮಾಡಿತ್ತು. ಮೇ 8ರೊಳಗೆ ಸೆನ್ಸಾರ್ ಮಾಡಿದರೆ ಮಂಜು ನಿರ್ಮಾಣದ 'ಗಾಡ್‌ಫಾದರ್' ಮೇ 11ರಂದು ಬಿಡುಗಡೆ, ತಪ್ಪಿದರೆ ಮುನಿರತ್ನ 'ಕಠಾರಿ ವೀರ..'ನನ್ನು ಮೇ 10ರಂದು ಬಿಡುಗಡೆ ಮಾಡಬಹುದು ಎಂಬ ಸೂತ್ರವನ್ನು ಸಿದ್ಧಪಡಿಸಲಾಗಿತ್ತು. ಇದಕ್ಕೆ ಉಭಯ ನಿರ್ಮಾಪಕರೂ ಒಪ್ಪಿಕೊಂಡಿದ್ದರು.
ಆದರೆ ಈಗ ಮುನಿರತ್ನ ತಿರುಗಿ ಬಿದ್ದಿದ್ದಾರೆ. ಸಂಧಾನದ ನಂತರವೂ ಹೇಳಿಕೆ ನೀಡುವುದನ್ನು ನಿಲ್ಲಿಸದೆ, ತನ್ನ ಚಿತ್ರದ ಪ್ರಚಾರಕ್ಕೂ ಅಡ್ಡಿ ಮಾಡುತ್ತಿರುವ ಮಂಜು ವಿರುದ್ಧ ಮತ್ತೆ ಸಮರ ಸಾರಿದ್ದಾರೆ. ನಾನು ನಿಗದಿತ ದಿನದಂದೇ ಚಿತ್ರ ಬಿಡುಗಡೆ ಮಾಡುತ್ತೇನೆ, 'ಗಾಡ್‌ಫಾದರ್' ಸೆನ್ಸಾರ್ ಆಗಲಿ ಬಿಡಲಿ ನಾನು ಲೆಕ್ಕಿಸುವುದಿಲ್ಲ ಎಂದಿದ್ದಾರೆ.
ಇದರೊಂದಿಗೆ ಉಪೇಂದ್ರ ನಾಯಕನಾಗಿರುವ ಚಿತ್ರಗಳ ಬಿಡುಗಡೆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ.
No comments:
Post a Comment