Tuesday, January 10, 2012

ಥೂ ನನ್ ಮಕ್ಳಾ ಹಾಡಿಗೆ ಉಪೇಂದ್ರ ಟಚ್ --Upendra Sings Again For A Recorded Song

 
 ಮಾಸ್ ಪ್ರೇಕ್ಷಕರನ್ನು ಮೆಚ್ಚಿಸುವ ಹಾಡುಗಳನ್ನು ಬರೆಯುವ ಕನ್ನಡದ ಕೆಲವೇ ಕೆಲವರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಒಬ್ಬರು. ಬರೀ ಬರೆದರಷ್ಟೇ ಸಾಕೇ? ಆ ಹಾಡಿಗೆ ಜೀವ ತುಂಬುವ ದನಿ ಬೇಕಲ್ಲವೇ? ದನಿಯಿದ್ದರೆ ಸಾಕೇ? ಅದು ಜನರಿಗೆ ತಲುಪುವಂತಿರಬೇಕಲ್ಲವೇ? ಅವು ಇಲ್ಲ ಅನ್ನೋವಾಗ ಬದಲಾವಣೆ ಸಹಜ. ಈಗ ಆಗಿರುವುದು ಅದೇ!

ಅಂದರೆ 'ಆರಕ್ಷಕ' ಚಿತ್ರದ 'ಥೂ ನನ್ ಮಕ್ಳಾ...' ಹಾಡನ್ನು ಸ್ವತಃ ಉಪ್ಪಿ ಹಾಡಿದ್ದಾರೆ. ನೋ.. ನೋ.. ನಾವು ಹೋದಲ್ಲೆಲ್ಲ ಕೇಳ್ತಾ ಇದ್ದೀವಿ, ಅದನ್ನು ಹಾಡಿರೋದು ಕೈಲಾಸ್ ಖೇರ್ ಅಂತೀರಾ? ಅದೂ ನಿಜಾನೇ. ಮೊನ್ನೆ ತಾನೇ ಬಿಡುಗಡೆಯಾಗಿರುವ ಆಲ್ಬಂನಲ್ಲಿರೋದು ಕೈಲಾಸ್ ಖೇರ್ ದನಿ. ಆದರೆ ಸಿನಿಮಾದಲ್ಲಿ ಮಾತ್ರ ಈ ಹಾಡು ಉಪ್ಪಿ ದನಿಯಲ್ಲಿರಲಿದೆ!

ಕೃಷ್ಣ ಪ್ರಜ್ವಲ್ ನಿರ್ಮಾಣದ 'ಆರಕ್ಷಕ' ಚಿತ್ರದ ಈ ಹಾಡು ಆರಂಭದಿಂದಲೂ ಪ್ರಚಾರದಲ್ಲಿತ್ತು. ಆದರೆ ಹಾಡು ಕೇಳಿದವರಿಗೆ ಕೈಲಾಸ್ ಖೇರ್ ಉಚ್ಛಾರ ಇಷ್ಟವಾಗಿರಲಿಲ್ಲ. ವಿಮರ್ಶಕರು ಸೇರಿದಂತೆ ಹಲವರು ಆಕ್ಷೇಪಿಸಿದ್ದರು. ಕೈಲಾಸ್ ಬದಲು ಸ್ವತಃ ಉಪ್ಪಿಯೇ ಹಾಡಬೇಕಿತ್ತು ಅಂತ ಚಿತ್ರರಂಗದ ಆತ್ಮೀಯರೇ ಹೇಳಿದ್ದರು.

ಅಭಿಮಾನಿಗಳಂತೂ ಈ ಹಾಡನ್ನು ಉಪ್ಪಿಯಿಂದಲೇ ಹಾಡಿಸಬೇಕು ಅಂತ ಪಟ್ಟು ಹಿಡಿಯ ತೊಡಗಿದರು. ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಹಾಡುಗಳು ಉಪ್ಪಿ ದನಿಯಲ್ಲಿ ಸೂಪರ್ ಹಿಟ್ ಆಗಿವೆ. ಹಾಗಾಗಿ ಈ ಹಾಡನ್ನು ಕೂಡ ಉಪ್ಪಿಯೇ ಹಾಡಬೇಕು ಎಂಬ ಒತ್ತಾಯ ಜೋರಾಗ ತೊಡಗಿತು.

ಇದಕ್ಕೆ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಕೊನೆಗೂ ಮಣಿದರು. ಕೈಲಾಸ್ ಖೇರ್ ಹಾಡಿದ್ದ 'ಥೂ ನನ್ ಮಕ್ಳಾ ಗಂಡಸ್ರಾ ನೀವು ಮೀಸೆ ಇದ್ದರೆ.. ಎಪ್ಪತ್ರಲ್ಲೂ ಎದ್ದು ಬಂದ್ರಲ್ಲೋ ಅಣ್ಣಾ ಹಜಾರೆ...' ಹಾಡನ್ನು ಉಪ್ಪಿ ಕೈಯಲ್ಲಿ ಹಾಡಿಸಿದ್ದಾರೆ. ಹಾಡು ಸೂಪರ್ರಾಗಿ ಬಂದಿದೆಯಂತೆ. ಸಿನಿಮಾದಲ್ಲಿ ಉಪ್ಪಿ ಹಾಡಿದ ಹಾಡೇ ಇರುತ್ತದೆ ಮತ್ತು ಎರಡನೇ ಹಂತದಲ್ಲಿ ಮಾರುಕಟ್ಟೆಗೆ ಬರುವ ಆಡಿಯೋದಲ್ಲಿ ಹೆಚ್ಚುವರಿಯಾಗಿ ಉಪ್ಪಿ ಹಾಡನ್ನು ಸೇರಿಸಲಾಗುತ್ತದೆಯಂತೆ.

ಅಂದ ಹಾಗೆ ರಾಗಿಣಿ ದ್ವಿವೇದಿ ಮತ್ತು ಸದಾ ನಾಯಕಿಯರಾಗಿರುವ ಈ ಚಿತ್ರ ಜನವರಿ 26ರಂದೇ ತೆರೆಗೆ ಬರುತ್ತಿದೆ.
 
ENGLISH VERSION 
 
Upendra lent his voice again for the popular song “Thoo Kachada Nan Makkla’ from the film “Aarakshaka’ for which he had written the lyrics. P.Vasu has directed this psychological thriller film which is produced by Krishna Prajwal. Raagini and Sada are the two heroines of the film.

Earlier the film’s music director Guru Kiran had used singer Kailash Kher to record this song and the song was part of the audio album which was released a few days ago. But many people in the industry and also a large number of Uppi’s fans were of the opinion that the song would have been better placed if it was sung by actor-writer himself. As most of the songs with political overtones written and sung by Upendara had become super hits earlier, the fans of the actor wanted that the song had to recorded again. Bowing to the request of Uppi’s fans and general opinion expressed by the film personalities, Krishna Prajwal decided to record the song again with Uppi’s voice a few days ago.

The song with Uppi’s voice will be used in the film and the next consignment of audio releases will have an additional song recorded recently along with the song in the voice of Kailash Kher.

Meanwhile, Aarakshaka will be releasing on January 26, according to sources. The release of Darshan starrer Chingaari directed by Harsha may be postponed by a week on February 3.

No comments:

Post a Comment