Thursday, January 12, 2012

ಉಪೇಂದ್ರ ಈಗ ರೀಮೇಕ್ ಚಿತ್ರಗಳ ಸರದಾರ?....ಸೂಪರ್ ನಂತರ ಕ್ರಿಯೆಟಿವ್ ಉಪೇಂದ್ರ ಮಾಯ!

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರಿಗೆ ಏನಾಗಿದೆ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಕಾರಣ ಕ್ರಿಯೆಟಿವಿಟಿಗೆ ಇನ್ನೊಂದು ಹೆಸರು ಎಂಬಂತಿರುವ ಉಪೇಂದ್ರ, ಸಾಲುಸಾಲು ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಿರ್ದೇಶನದ 'ಸೂಪರ್' ಚಿತ್ರದ ನಂತರ ಕೇವಲ ರೀಮೇಕ್ ಸರದಾರ ಆಗಿದ್ದಾರೆ ಸೂಪರ್ ಸ್ಟಾರ್ ಉಪೇಂದ್ರ.

ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲ ನಿರ್ದೇಶಕ ಅಂತ ಒಂದು ಕಡೆಯಿಂದ ಕರೆಸಿಕೊಳ್ಳುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಇನ್ನೊಂದು ಕಡೆ ಹಳಸಲು ಚಿತ್ರಾನ್ನಕ್ಕೆ ಮೊರೆ ಹೋಗುತ್ತಿದ್ದಾರೆ. ಅದೂ ಒಂದೆರಡಲ್ಲ. ಸಾಲು ಸಾಲು ರಿಮೇಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆ ತೆಲುಗಿನ 'ಚಿಂತಕಾಯಲ ರವಿ'!

ಇದೀಗ ತೆಲುಗು ಚಿತ್ರ, 2008ರಲ್ಲಿ ಬಿಡುಗಡೆಯಾಗಿದ್ದ ವೆಂಕಟೇಶ್ ನಾಯಕತ್ವದ 'ಚಿಂತಕಾಯಲ ರವಿ' ಕನ್ನಡಕ್ಕೆ ರೀಮೇಕ್ ಆಗುತ್ತಿದ್ದು, ಅದಕ್ಕೆ ಉಪ್ಪಿಯೇ ನಾಯಕ ಎಂಬ ಸುದ್ದಿ ಬಂದಿದೆ. ಅಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರದ ರಿಮೇಕ್ ಹಕ್ಕುಗಳನ್ನು ನಿರ್ಮಾಪಕ ಅಣಜಿ ನಾಗರಾಜ್ ತೆಗೆದುಕೊಂಡಿದ್ದು ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಲಿದ್ದಾರೆ


ಬಿಡುಗಡೆಗೆ ರೆಡಿಯಾಗಿರುವ 'ಆರಕ್ಷಕ' ಮತ್ತು 'ಕಠಾರಿ ವೀರ ಸುರ ಸುಂದರಾಂಗಿ' ಹೊರತುಪಡಿಸಿದರೆ ಉಪ್ಪಿ ನಟಿಸುತ್ತಿರುವ ಎಲ್ಲಾ ಚಿತ್ರಗಳು ರಿಮೇಕ್. ಜಯಮಾಲಾ ಪುತ್ರಿ ಸೌಂದರ್ಯಾ ನಾಯಕಿಯಾಗಿರುವ 'ಗಾಡ್‌ಫಾದರ್', ಲಕ್ಷ್ಮಿ ರೈ ನಾಯಕಿಯಾಗಿರುವ 'ಕಲ್ಪನಾ' ಸೇರಿದಂತೆ ಹಲವು ರೀಮೇಕ್ ಚಿತ್ರಗಳು ಉಪ್ಪಿ ಕೈಯಲ್ಲಿವೆ.

ಸದ್ಯಕ್ಕೆ ನಿರ್ಮಾಪಕ ಅಣಜಿ ನಾಗರಾಜ್ 'ಪರಮಶಿವ' ಮತ್ತು 'ಭೀಮಾ ತೀರದಲ್ಲಿ' ಚಿತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಅತ್ತ ಉಪ್ಪಿ ಕೂಡ ತಾನು ಒಪ್ಪಿಕೊಂಡಿರುವ ಚಿತ್ರಗಳಲ್ಲಿ ಬ್ಯುಸಿ. ಹಾಗಾಗಿ ಉಪ್ಪಿಯ ಹೊಸ ರಿಮೇಕ್ ಚಿತ್ರ 'ಚಿಂತಾಕಾಯಲ ರವಿ' ಸದ್ಯಕ್ಕೆ ಸೆಟ್ಟೇರುವ ಸೂಚನೆಯಿಲ್ಲ, ಬಹುಶಃ ಮೇ ತಿಂಗಳ ನಂತರ ಪ್ರಾರಂಭ.

ಯಾಕೆ ಕನ್ನಡದ ರಿಯಲ್ ಸ್ಟಾರ್ ಉಪ್ಪಿ, ರೀಮೇಕ್ ಚಿತ್ರಗಳ ಮೊರೆ ಹೋಗಿದ್ದಾರೆ ಎಂಬುದು ಅಭಿಮಾನಿಗಳ ಕೂಗು. ಬರೋಬ್ಬರಿ ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಅಭಿಮಾನಿಗಳ ಕರೆಗೆ ಓಗೊಟ್ಟು ಮತ್ತೆ ನಿರ್ದೆಶನಕ್ಕೆ ಮರಳಿದ್ದ ಉಪೇಂದ್ರ, ಸೂಪರ್ ಚಿತ್ರದ ಮೂಲಕ ಕನ್ನಡದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದರು. ಆದರೆ ನಂತರ ರೀಮೇಕ್ ಸರದಾರ ಆಗಿದ್ದು ಯಾಕೆ? ಉತ್ತರಕ್ಕೆ ಉಪೇಂದ್ರರನ್ನೇ ಕಾಯಬೇಕು.

2 comments:

  1. ಬೇಡ ಉಪ್ಪಿ ಸರ್ .. ಕನ್ನಡ ಚಿತ್ರರಂಗ ಒಂದು ಸಾಗರ ವಿದ್ದಂತೆ ... ಆದ್ರೆ ಈ ಸಾಗರದಲ್ಲಿ ಹೆಚ್ಚು ಮಿನುಗಲಿಲ್ಲ ಇರೋ ಮಿನುಗಳೆಲ್ಲ ಬೇರೆ ಯವರ ಬಲೆಗೆ
    ಸಿಕ್ಕಿ ಬೇರೆ ಚಿತ್ರರಂಗವನ್ನು ಉದ್ದರಿಸುತ್ತಿವೆ ... ಇದಕ್ಕೆ ಕನ್ನಡಿಗರ ಸ್ವಾಭ್ವವೇ ಕರಣ ನೀವಾದರೂ ಸ್ವಮೇಕ್ ನತ್ತ ಒಲವು ತೋರಿಸಿ
    ಇದು ಒಬ್ಬ ಕನ್ನಡಿಗನ ಕೂಗು .....

    ReplyDelete