ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು
ರಂಜಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ್ದ 'ಉಪೇಂದ್ರ'
ಚಿತ್ರದ ಎರಡನೇ ಭಾಗ ಸದ್ಯದಲ್ಲೇ ಸೆಟ್ಟೇರಲಿದೆ. ಈ ವಿಷಯವನ್ನು ಸ್ವತಃ ರಿಯಲ್ ಸ್ಟಾರ್
ಉಪೇಂದ್ರ ಅವರು 'ಸೂಪರೋ ರಂಗಾ' ಚಿತ್ರದ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದರು.
ಶುಕ್ರವಾರ ಈ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಗೊಂಡಿದೆ.
ಕಳೆದ ವರ್ಷದ ಹುಟ್ಟುಹಬ್ಬದ ದಿನ(ಸೆ.18) ಅಂಕಿ ಸಂಖ್ಯೆ, ಅಕ್ಷರಗಳಿಂದ ಕೂಡಿದ್ದ
ವಿಚಿತ್ರವಾದ ಬಾಕ್ಸ್ ಇರುವ ಪೋಸ್ಟರ್ ರಿಲೀಸ್ ಮಾಡಿದ್ದ ಉಪೇಂದ್ರ ಅವರು ಇತ್ತೀಚೆಗೆ
ಚಿತ್ರವನ್ನು ಆರಂಭಿಸುವ ಸೂಚನೆ ಕೊಟ್ಟಿದ್ದರು. ಈಗ ಹೊಸ ಪೋಸ್ಟರ್ ನಲ್ಲಿ ನಿMMA
ಉಪ್ಪಿUnknownನು ಎಂದು ಚಿತ್ರದ ಮುಹೂರ್ತಕ್ಕೆ ಆಹ್ವಾನ ನೀಡಿದ್ದಾರೆ.
1999ರಲ್ಲಿ ತೆರೆಕಂಡು ಬಾಕ್ಸಾಫೀಸ್ ಕೊಳ್ಳೆಹೊಡೆದಿದ್ದ 'ಉಪೇಂದ್ರ' ಚಿತ್ರದಲ್ಲಿ ಮೂವರು
ನಾಯಕಿಯರಿದ್ದರು. ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ. ಸದ್ಯಕ್ಕೆ ಈ ಮೂವರು
ತಾರೆಯರು ಮಂಕಾಗಿರುವುದರಿಂದ ಇವರ ಬದಲಿಗೆ ಯಾರನ್ನು ಉಪ್ಪಿ ಆರಿಸುತ್ತಾರೆ ಎಂಬುದನ್ನು
ಅವರ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಹಳೆ ತಂಡದಲ್ಲಿದ್ದ ಗುರುಕಿರಣ್ ಅವರು ಸಂಗೀತ, ಎಚ್ ಸಿ ವೇಣು ಅವರ ಛಾಯಾಗ್ರಹಣ ಈ
ಚಿತ್ರದಲ್ಲೂ ಮುಂದುವರೆಯಲಿದೆ. ಉಪೇಂದ್ರ ಅವರ ಸ್ವಂತ ಬ್ಯಾನರ್ ನಲ್ಲಿ
ನಿರ್ಮಾಣವಾಗುತ್ತದೋ ಅಥವಾ ಬೇರೆಯವರ ನಿರ್ಮಾಣದಲ್ಲಿ ಸೆಟ್ಟೇರುತ್ತದೋ ಎಂಬುದರ ಬಗ್ಗೆ
ಕುತೂಹಲವಿದ್ದರೂ ಬಹುತೇಕ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರು ಚಿತ್ರ ನಿರ್ಮಾಣಕ್ಕೆ
ಮುಂದಾಗುವುದು ಗ್ಯಾರಂಟಿ ಎನ್ನಲಾಗಿದೆ.
ಉಪ್ಪಿ 2 ಏನು ಕಥೆ
ಉಪ್ಪಿ ಅವರ 45ನೇ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 18, 2013) ಚಿತ್ರವನ್ನು
ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಆದರೆ ಇದು 'ಉಪೇಂದ್ರ' (1999)
ಚಿತ್ರದ ಮುಂದಿವರಿದ ಭಾಗವಂತೂ ಖಂಡಿತ ಅಲ್ಲ ಎಂದಿದ್ದಾರೆ ಉಪ್ಪಿ.
ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಪೆನ್ನು, ಪೇಪರ್ ಖರ್ಚು ಮಾಡಿರುವ ಉಪ್ಪಿ ಅವರು
ಅದಕ್ಕಿಂತ ಹೆಚ್ಚಾಗಿ ತಲೆ ಓಡಿಸಿದ್ದು ಅದ್ಭುತ ಸ್ಕ್ರಿಪ್ಟ್ ಕೊನೆಗೂ
ತಯಾರಿಸಿದ್ದಾರಂತೆ. ಎಲ್ಲಾ ಪಕ್ಕಾ ಆದಮೇಲೆ ಚಿತ್ರ ಸೆಟ್ಟೇರುವ ವಿಷಯವನ್ನು
ಖಚಿತಪಡಿಸಿದ್ದಾರೆ.
ಉಪ್ಪಿ 2 ಪೋಸ್ಟರ್
ಹೊಸ ಫೊಸ್ಟರ್ ನಲ್ಲಿ ಅಂದು 'ಉಪೇಂದ್ರ' ನಾನು ಇಂದು 'ಉಪ್ಪಿ 2' ನೀನು ಎಂದು
ಬರೆಯಲಾಗಿದೆ. ಗಾಗಲ್ಸ್ ಹಾಕಿರುವ ಉಪ್ಪಿ ಹಣೆ ಮೇಲೆ Unknown(ಅನ್ನುವವನು) ಎಂದು
ಹಾಕಲಾಗಿದೆ.
ಕನ್ನಡ ಹಾಗೂ ಇಂಗ್ಲೀಷ್ ಅಕ್ಷರ ಮಿಕ್ಸ್ ಮಾಡಿ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿ ನೀನು, ಕ್ಲ್ಯಾಪ್ : ನೀನು, ಮೊದಲ ದೃಶ್ಯದ ನಟನೆ : ನೀನು ಎಂದು
ಬರೆಯಲಾಗಿದೆ.
ಉಪೇಂದ್ರ ಚಿತ್ರದಲ್ಲಿ ಅದ್ವೈತ ತತ್ತ್ವ(ತತ್ವಮಸಿ) ಸಾರಿದ್ದ ಉಪ್ಪಿ ಇಲ್ಲಿ ದ್ವೈತ
ತತ್ತ್ವ ಸಾರಲು ಹೊರಟ ಹಾಗೆ ಕಾಣುತ್ತದೆ. ನಾನು-ನೀನು ಎಂಬುದು ಅದನ್ನೇ ಹೇಳುವಂತಿದೆ.
ಮಿಕ್ಕಂತೆ ಪೋಸ್ಟರ್ ಆಹ್ವಾನ ಪತ್ರಿಕೆ ಎನ್ನಬಹುದು.
ಅಹ್ವಾನ ಪತ್ರಿಕೆ
ಕಂಠೀರವ ಸ್ಟುಡಿಯೋದಲ್ಲಿ 'ಉಪ್ಪಿಟ್ಟು (uppi 2) ಕಾರ್ಯಕ್ರಮ ಸೆ.18ರಂದು
ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಕನ್ನಡ, ತೆಲುಗು, ತಮಿಳಿನ ಬರುತ್ತಿರುವ ಈ ಚಿತ್ರದ
ನಿರ್ಮಾಪಕರು ಪ್ರಿಯಾಂಕಾ ಉಪೇಂದ್ರ, ಕಥೆ, ಚಿತ್ರಕಥೆ ಸಂಭಾಷಣೆ, ನಿರ್ದೇಶನ ಉಪೇಂದ್ರ
ಅವರದ್ದಾಗಿದೆ.
ಆಹ್ವಾನ ಪತ್ರಿಕೆಯನ್ನು ವಿಭಿನ್ನವಾಗಿ ಮುದ್ರಿಸಿ ಎಲ್ಲರನ್ನು ಸೆಳೆಯುವ ತಂತ್ರ ಉಪ್ಪಿಗೆ
ಕರಗತವಾಗಿದೆ. ಉಪೇಂದ್ರ ಅವರ ಸ್ವಂತ ಬ್ಯಾನರ್ ಆರಂಭ ಕೂಡಾ ಚಿತ್ರರಂಗಕ್ಕೆ
ಶುಭಸೂಚಕವಾಗಿದೆ.
ವಿಳಂಬವಾಗಲಿದೆ
ಉಪೇಂದ್ರ ಅವರ ಹುಟ್ಟುಹಬ್ಬದ ದಿನ ತೆಂಗಿನ ಕಾಯಿ ಒಡೆದು ಉಪೇಂದ್ರ 2 ಚಿತ್ರಕ್ಕೆ
ಮುಹೂರ್ತ ನಡೆಸಿದರೂ ಶೂಟಿಂಗ್ ಮಾತ್ರ ಇನ್ನಷ್ಟು ವಿಳಂಬವಾಗಲಿದೆ.ಉಪ್ಪಿ ಅಭಿನಯದ ಸೂಪರೋ
ರಂಗಾ ಚಿತ್ರ ಮುಗಿಸಲು ಕನಿಷ್ಠ ಮೂರ್ನಾಲ್ಕು ತಿಂಗಳು ಬೇಕಂತೆ. ಹೀಗಾಗಿ ಉಪೇಂದ್ರ 2
ಚಿತ್ರಕ್ಕಾಗಿ ಇನ್ನಷ್ಟು ಕಾಲ ಅಭಿಮಾನಿಗಳು ಕಾಯಲೇಬೇಕಾಗಿದೆ.
ಸೂಪರ್ (2010) ಚಿತ್ರದ ಬಳಿಕ ಉಪೇಂದ್ರ ಯಾವ ಚಿತ್ರವನ್ನೂ ನಿರ್ದೇಶಿಸಿಲ್ಲ. ಉಪ್ಪಿ
ಡೈರೆಕ್ಟರ್ ಹ್ಯಾಟ್ ಧರಿಸಿದರೆ ಆ ಚಿತ್ರ ಸೋಲುವ ಮಾತೇ ಇಲ್ಲ ಎಂಬ
ನಂಬಿಕೆಯಿದೆ.ಮುಂದೇನಾಗುತ್ತೋ ಕಾದು ನೋಡೋಣ
No comments:
Post a Comment