ಏಪ್ರಿಲ್ 24 ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ. ರಾಜ್
ಹುಟ್ಟುಹಬ್ಬವೆಂದರೆ ಇಡೀ ಕನ್ನಡ ಚಿತ್ರೋದ್ಯಮಕ್ಕೆ ಹಬ್ಬದ ಸಂಭ್ರಮ. ಸಿನಿಮಾ ಲೋಕದ
ದಂತಕತೆ ಡಾ. ರಾಜ್ ಜನ್ಮದಿನದ ಕನ್ನಡದ ಕೋಟ್ಯಾಧಿಪತಿ ವಿಶೇಷ ಸಂಚಿಕೆಯಲ್ಲಿ ಸುವರ್ಣ
ವಾಹಿನಿ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಹ್ವಾನಿಸಿದೆ.
ನಾನು ಸೂಪರ್ರೋ..ರಂಗಾ ಎಂದು ಉಪೇಂದ್ರ ಹಾಟ್ ಸೀಟಿನಲ್ಲಿ ಕೂತು ಲಕ್ಷ.. ಲಕ್ಷ ಗೆಲ್ಲಲು
ಒಂದು ಸದುದ್ದೇಶ ಇಟ್ಟುಕೊಂಡು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಕ ಪುನೀತ್ ಜೊತೆ ಉಪೇಂದ್ರ ಬರೀ ಓಳು.. ಬರೀ ಓಳು ಹಾಡಿಗೆ ಹೆಜ್ಜೆ
ಕೂಡಾ ಹಾಕಲಿದ್ದಾರೆ. ಅಷ್ಟೇ ಅಲ್ಲದೆ ಆಲ್ ಟೈಮ್ ಫೇಮಸ್ ರಕ್ತ ಕಣ್ಣೀರು ಚಿತ್ರದ ಕೆಲವು
ಡೈಲಾಗ್ ಬೇರೆ ಹೊಡೆಯಲಿದ್ದಾರೆ ಮ್ಯಾನ್.. ಡೈಲಾಗ್ ಹೊಡೆಯಲಿದ್ದಾರೆ.
ಕನ್ನಡ ಚಿತ್ರರಂಗದ ಈ ಇಬ್ಬರೂ ಖ್ಯಾತ ನಟರು ತಮ್ಮ ಮಾಹಿತಿ, ಅನುಭವಗಳನ್ನು ಮತ್ತು
ಉಪೇಂದ್ರ ತಮ್ಮ ಜೀವನದ ಕುತೂಹಲಕಾರಿ ಅಂಶಗಳನ್ನು ಹಂಚಿಕೊಳ್ಳುತ್ತಾ ಕನ್ನಡದ
ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕೋಟಿ ಗೆಲ್ಲುವ ಆಟವಾಡಲಿದ್ದಾರೆ.
ಸುವರ್ಣ ವಾಹಿನಿ ರಾಜ್ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಉಪ್ಪಿಯನ್ನು ಆಹ್ವಾನಿಸಿದ್ದಕ್ಕೆ
ಕಾರಣವೇನು?
ಉಪೇಂದ್ರ ನಿರ್ದೇಶನ ಮಾಡಿದ ಓಂ ಚಿತ್ರವನ್ನು ನಿರ್ಮಿಸಿದ್ದೇ ರಾಜಕುಮಾರ್
ಫ್ಯಾಮಿಲಿ. ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಮೂಡಿಬಂದ ಓಂ ಚಿತ್ರ ಕನ್ನಡ ಚಿತ್ರರಂಗದಲ್ಲಿ
ಇವತ್ತಿಗೂ ದಾಖಲೆ ಪ್ರದರ್ಶನ ಕಾಣುತ್ತಲೇ ಇದೆ.
ಉಪೇಂದ್ರ ಓಂ ಚಿತ್ರವನ್ನು ಆ ಮಟ್ಟದಲ್ಲಿ ನಿರ್ದೇಶನ ಮಾಡಿದ್ದರು. ಶಿವಣ್ಣನ
ವೃತ್ತಿ ಜೀವನಕ್ಕೆ ಒಂದು ಅದ್ಭುತ ತಿರುವು ತಂದುಕೊಟ್ಟ ಚಿತ್ರ. ಇವತ್ತಿಗೂ
ಚಿತ್ರಮಂದಿರದಲ್ಲಿ ಬಿಡುಗಡೆಗೊಂಡರೆ ಕನಿಷ್ಟ ಪಕ್ಷ ಲಕ್ಷದಷ್ಟಾದರೂ ಲಾಭ ಗಳಿಸೇ
ಗಳಿಸುತ್ತದೆ.
ಅಂಥ ಓಂ ಚಿತ್ರವನ್ನು ನಿರ್ದೇಶಿಸಿ, ಚಿತ್ರೋದ್ಯಮದಲ್ಲಿ ದೊಡ್ಡ ಮೊತ್ತದ ಹಣವನ್ನು
ಉಪೇಂದ್ರ ಮೊಟ್ಟಮೊದಲ ಬಾರಿಗೆ ಪಡೆದಿದ್ದು ಸ್ವತಃ ಪಾರ್ವತಮ್ಮ ರಾಜ್‍ಕುಮಾರ್ ಅವರ
ಕೈಯಿಂದ. ಡಾ.ರಾಜ್ ಕೂಡ ಓಂ ಚಿತ್ರ ನೋಡಿ ಉಪ್ಪಿಯ ಬೆನ್ನು ತಟ್ಟಿದ್ದರು.
ಅಲ್ಲಿಂದ ಇಲ್ಲಿ ತನಕ ಉಪ್ಪಿ ನಡೆದದ್ದೇ ಹಾದಿ ಎನ್ನುವಂತೇ ಅವರು
ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಅಂಥ ಉಪ್ಪಿ ಹಾಟ್ ಸೀಟಿಗೆ ಬಂದು ಲಕ್ಷ ಲಕ್ಷ
ಗೆದ್ದಿದ್ದಾರೆ.
ಅಂಥದ್ದೊಂದು ಲಕ್ಷಾಂತರ ಮೊತ್ತವನ್ನು (6 ಲಕ್ಷ 40 ಸಾವಿರ ರೂಪಾಯಿ) ನಗರದ ಮೈಸೂರು
ರಸ್ತೆಯಲ್ಲಿರುವ ಬ್ಯಾಲಾಳು ಮತ್ತು ಚಿಂಚಲಗೂಪ್ಪೆ ಗ್ರಾಮದಲ್ಲಿರುವ ಎರಡು ಕನ್ನಡ
ಮಾಧ್ಯಮ ಶಾಲೆಗಳಿಗೆ ಸಮವಾಗಿ ಹಂಚಬೇಕು ಎನ್ನುವ ಚಾರಿಟೆಬಲ್ ಉದ್ದೇಶ ಉಪೇಂದ್ರ
ಅವರದ್ದಾಗಿದೆ. ಈ ಕಾರ್ಯಕ್ರಮ ಇದೇ ಬುಧವಾರ ಎಪ್ರಿಲ್ 24 ರಂದು ರಾತ್ರಿ 8 ಗಂಟೆಗೆ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
For the coming Dr Rajakumar birth anniversary - April
24 the Suvarna satellite channel has roped in super star and real star
Upendra in the hot seat for a special program of 'Kannadada
Kotyadipathi' second season.
Upendra faced a few questions sitting on the hot seat
and taking on questions from his colleague power star Puneeth
Rajakumar. Upendra went up to Rs.6.40 lakhs as prize money in the
knowledge based program.
Upendra remembered his growth with the Dr Rajakumar
family banner. It was 'Om' the first authentic underworld subject for
Shivarajakumar that set a new trend in the Kannada cinema industry.
The prize money that Upendra earned goes to Balyaalu
and Chinchalagoppe village two Kannada schools. They are situated on
Mysore road.
The power star and real star combined 'Kannadada
Kotyadhipathi' was also entertaining because of Upendra singing and
dancing for Bari Olu....and delivery dialogues from 'Raktha Kanneeru'.
No comments:
Post a Comment