Tuesday, February 7, 2012

ಆರಕ್ಷಕ 'ಕನ್ ಫ್ಯೂಸ್' ಬಗ್ಗೆ ಉಪೇಂದ್ರ ಉತ್ತರ - ತಮಿಳು, ತೆಲುಗಿಗೆ ರೀಮೇಕ್ ಆಗಲಿದೆ 'ಆರಕ್ಷಕ'

ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ 'ಆರಕ್ಷಕ' ಚಿತ್ರ, 'ಚಿಂಗಾರಿ' ಆರ್ಭಟದ ನಡುವೆಯೂ ಬಾಕ್ಸಾಫೀಸಿನಲ್ಲಿ ಮುಗ್ಗರಿಸದೇ ನಿರಾತಂಕವಾಗಿ ಸಾಗುತ್ತಿದೆ. ಈ ಚಿತ್ರ ಮುಂದೆ ತಮಿಳು-ತೆಲುಗಿಗೆ ರಿಮೇಕ್ ಆಗಲಿರುವುದನ್ನು ಖಾತ್ರಿ ಮಾಡಿದೆ ಆರಕ್ಷಕ ಚಿತ್ರತಂಡ. ಅಲ್ಲಿ ನಾಯಕರಾರು ಎಂಬ ಪ್ರಶ್ನೆಗೆ ಮುಂದೆ ಉತ್ತರ ದೊರೆಯಬೇಕಾಗಿದೆ.

ಬರೀ 80 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದ್ದ 'ಆರಕ್ಷಕ' ಹೆಚ್ಚು ಪ್ರಚಾರವನ್ನೇ ಪಡೆದುಕೊಂಡಿರಲಿಲ್ಲ. ಹೀಗಿದ್ದರೂ ಚಿತ್ರ ಮೊದಲ ವಾರದಲ್ಲಿ ರು. 3.42 ಕೋಟಿ ರು. ಗಳಿಕೆ ದಾಖಲಿಸಿದೆ. ಥಿಯೇಟರು ಬಾಡಿಗೆ ಕಳೆದು ನಿರ್ಮಾಪಕ ಕೃಷ್ಣ ಪ್ರಜ್ವಲ್ ಕೈಗೆ 2.5 ಕೋಟಿ ಸೇರಿದೆ. ಚಿತ್ರದ ಒಟ್ಟು ಬಜೆಟ್ 7 ಕೋಟಿ ರೂಪಾಯಿಗಳು.

ಮೊದಲ ವಾರದಲ್ಲೇ ಇಷ್ಟು ಗಳಿಕೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಲಾಭವಾಗುವುದು ಖಂಡಿತ ಎಂಬುದು ಚಿತ್ರತಂಡ ಹಾಗೂ ಗಾಂಧಿನಗರದ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಚಿತ್ರ ಗೆಲುವಿನತ್ತ ಮುಖಮಾಡಿರುವುದರ ಬಗ್ಗೆ ಶನಿವಾರ ನಡೆಸಲಾದ ಪತ್ರಿಕಾಗೋಷ್ಠಿಗೆ ಎಲ್ಲರಿಗಿಂತ ಮುಂಚೆ ಬಂದವರು ನಿರ್ದೇಶಕ ಪಿ. ವಾಸು. ಸ್ವಲ್ಪ ತಡವಾಗಿ ಬಂದರು ಆರಕ್ಷಕದ ನಾಯಕ ಹಾಗೂ ರಿಯಲ್ ಸ್ಟಾರ್ ಉಪೇಂದ್ರ.

ಪಿ. ವಾಸು ಪತ್ರಕರ್ತರ 'ಪ್ರಶ್ನೆ'ಗಳಿಗೆ ಉತ್ತರಿಸುತ್ತಾ ಮೊದಲು 'ಗೊಂದಲ'ಗಳನ್ನು ನಿವಾರಿಸುವ ಯತ್ನ ಮಾಡಿದರು. "ಆರಕ್ಷಕ' ಗಳಿಕೆ ಚೆನ್ನಾಗಿದೆ. ಈ ಚಿತ್ರದಲ್ಲಿ ಕಂಡುಬರುವ ಗೊಂದಲಗಳು ಉದ್ದೇಶಪೂರ್ವಕ. ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದರಿಂದ ಕನ್‌ಫ್ಯೂಸ್ ಮಾಡುವ ಅನಿವಾರ್ಯತೆಯಿತ್ತು. ನನ್ನ ವಿಭಿನ್ನ ಪ್ರಯತ್ನದ ಚಿತ್ರಕತೆಯ ಬಗ್ಗೆ ಸಂತಸವಿದೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ವೇಳೆ 'ಆರಕ್ಷಕ' ರಿಮೇಕ್ ಆವೃತ್ತಿಗಾಗಿ ತಮಿಳು-ತೆಲುಗಿನಲ್ಲಿ ಭಾರೀ ಬೇಡಿಕೆ ಇರುವ ಸಂಗತಿಯನ್ನೂ ವಾಸು ಹೇಳಿದರು. ಆದರೆ ಈ ಬಗ್ಗೆ ಹೆಚ್ಚು ಮಾಹಿತಿ ನೀಡಲಿಲ್ಲ. ಆದರೂ, ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳು ತಮಿಳು-ತೆಲುಗಿಗೆ ರಿಮೇಕ್ ಆಗಿರುವುದರಿಂದ 'ಆರಕ್ಷಕ'ದ ರಿಮೇಕಿನಲ್ಲಿ ನಟಿಸಲು ದೊಡ್ಡ ದೊಡ್ಡ ಹೀರೋಗಳು ಮುಂದೆ ಬಂದರೂ ಅಚ್ಚರಿಯಿಲ್ಲ ಎನ್ನಬಹುದು.

ಆರಕ್ಷಕ ನಾಯಕ ರಿಯಲ್ ಸ್ಟಾರ್ ಉಪೇಂದ್ರ, ನನ್ನ ನಿರ್ದೇಶನದ 'ಎ'ಯಲ್ಲಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ಹಾಕಿಸಿದ್ದೆ. ನನ್ನ ಪ್ರಕಾರ 'ಆರಕ್ಷಕ' ಚಿತ್ರ ಅತಿ ಬುದ್ಧಿವಂತರಿಗೆ ಮಾತ್ರ" ಎಂದರು. ಮುಂದುವರಿದ ಉಪ್ಪಿ "ಚಿತ್ರಕತೆಯಲ್ಲಿ ಕ್ಲಿಷ್ಟತೆಯಿದೆ. ಒಂದೇ ಸಲ ನೋಡಿದಾಗ ಅರ್ಥವಾಗೋದು ಕಷ್ಟ, ಎರಡನೇ ಬಾರಿ ಬರೋದು ಅನಿವಾರ್ಯ

No comments:

Post a Comment