2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಗುರುವಾರ (ಏ.5) ಬೆಂಗಳೂರಿನಲ್ಲಿ ಪ್ರಕಟಿಸಿದರು. ಒಟ್ಟು 30 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಬಾರಿ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಶಿವರಾಂ ಆಯ್ಕೆಯಾಗಿದ್ದಾರೆ. ಪ್ರಾರ್ಥನೆ ಚಿತ್ರ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ.
ಪೃಥ್ವಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಯು ಸೂಸೈಡ್ ಚಿತ್ರದಲ್ಲಿ ಅಭಿನಯಿಸಿದ್ದ ಕಲ್ಯಾಣಿಗೆ ದಕ್ಕಿದೆ.
ಅತ್ಯುತ್ತಮ ಚಿತ್ರವಾಗಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಚಿತ್ರ ಪಾತ್ರವಾಗಿದೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾರ್ಗವ ಅವರು ಪಾತ್ರರಾಗಿದ್ದಾರೆ. ಯಾರಿಗೆ ಯಾವ ಪ್ರಶಸ್ತಿ ಪಟ್ಟಿ ನೋಡಿ.
* ಅತ್ಯುತ್ತಮ ಪೋಷಕ ನಟಿ: ವಿಜಯಲಕ್ಷ್ಮಿ ಸಿಂಗ್ (ವೀರಪರಂಪರೆ)
* ಅತ್ಯುತ್ತಮ ಪೋಷಕ ನಟ: ರಮೇಶ್ ಭಟ್ ಉಯ್ಯಾಲೆ
* ಅತ್ಯುತ್ತಮ ಮಕ್ಕಳ ಚಿತ್ರ: ನನ್ನ ಗೋಪಾಲ
* ಅತ್ಯುತ್ತಮ ಎರಡನೇ ಚಿತ್ರ: ಭಗವತಿ ಕಾಡು
* ಅತ್ಯುತ್ತಮ ಮೂರನೇ ಚಿತ್ರ: ಶಬ್ದಮಣಿ
* ಅತ್ಯುತ್ತಮ ಬಾಲನಟಿ: ಪ್ರಕೃತಿ (ಹೆಜ್ಜೆಗಳು)
* ಅತ್ಯುತ್ತಮ ಬಾಲನಟ: ಅನಿಲ್ ಕುಮಾರ್ (ನನ್ನ ಗೋಪಾಲ)
* ಪ್ರಾರ್ಥನೆ ಚಿತ್ರಕ್ಕೆ ವಿಶೇಷ ಪ್ರಶಸ್ತಿ
* ಅತ್ಯುತ್ತಮ ಹಿನ್ನೆಲೆ ಗಾಯಕ : ರವೀಂದ್ರ ಸೊರಗಾವಿ (ಪುಟ್ಟಕ್ಕನ ಹೈವೇ)
* ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ: ಕಂಚಿಲ್ದ ಬಾಲೆ
* ಅತ್ಯುತ್ತಮ ಸಂಗೀತ ನಿರ್ದೇಶಕ: ಗುರುಕಿರನ್ (ಮೈಲಾರಿ)
* ಅತ್ಯುತ್ತಮ ಕಥೆ ಬರಹಗಾರ: ಅಗ್ನಿ ಶ್ರೀಧರ್ (ತಮಸ್ಸು)
* ಅತ್ಯುತ್ತಮ ಗೀತ ರಚನೆ: ಡಾ ಎಚ್ ಎಸ್ ವೆಂಕಟೇಸ್ ಮೂರ್ತಿ (ಒಂದೂರಲ್ಲಿ)
* ಅತ್ಯುತ್ತಮ ಕಂಠದಾನ್ ಕಲಾವಿದ: ಶೃಂಗೇರಿ ರಾಮಣ್ಣ (ವೀರಪರಂಪರೆ)
* ಅತ್ಯುತ್ತಮ ಸಂಭಾಷಣೆಕಾರ: ಬರಗೂರು ರಾಮಚಂದ್ರಪ್ಪ (ಭೂಮಿತಾಯಿ)
* ಅತ್ಯುತ್ತಮ ಕಲಾ ನಿರ್ದೇಶಕ: ಹೊಸಮನೆ ಮೂರ್ತಿ (ಒಲವೇ ಮಂದಾರ)
* ಅತ್ಯುತ್ತಮ ಛಾಯಾಗ್ರಹಣ: ಸತ್ಯ ಹೆಗಡೆ (ಸಂಜು ವೆಡ್ಸ್ ಗೀತಾ)
* ಅತ್ಯುತ್ತಮ ಹಿನ್ನೆಲೆ ಗಾಯಕಿ: ಲಕ್ಷ್ಮಿ ಮನಮೋಹನ್ (ಗಾಂಧಿ ಸ್ಮೈಲ್)
* ಅತ್ಯುತ್ತಮ ಕಂಠದಾನ ಕಲಾವಿದೆ: ಶಶಿಕಲಾ (ಶಬ್ದಮಣಿ)
* ಅತ್ಯುತ್ತಮ ಚಿತ್ರಕಥೆ ಬರಹಗಾರ: ಬಿ ಸತೀಶ್ (ಪುಟ್ಟಕ್ಕನ ಹೈವೇ)
* ಅತ್ಯುತ್ತಮ ಧ್ವನಿಗ್ರಾಹಕ : ಆನಂದ್ (ಸಂಜು ವೆಡ್ಸ್ ಗೀತಾ)
* ಅತ್ಯುತ್ತಮ ಸಂಕಲನಕಾರ : ಜಾನಿ ಹರ್ಷ (ಸಂಜು ವೆಡ್ಸ್ ಗೀತಾ)
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ತರಂಗಿಣಿ
ಅತ್ಯುತ್ತಮ ನಟ, ನಟಿ ಪ್ರಶಸ್ತಿಯು ರು.20 ಸಾವಿರ ನಗದು ಬಹುಮಾನ 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕವನ್ನು ಒಳಗೊಂಡಿದೆ. ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಯು ತಲಾ ರು.2 ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕವನ್ನು ಒಳಗೊಂಡಿದೆ.
No comments:
Post a Comment