ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕನ್ನಡದಲ್ಲಿ ಮೊತ್ತ ಮೊದಲ ಬಾರಿ ಸಂಗೀತ ನೀಡಿರುವ ಚಿತ್ರವೆಂದು 'ಗಾಡ್ ಫಾದರ್' ಚಿತ್ರತಂಡ ಹೇಳಿಕೊಳ್ಳುತ್ತಿದೆ. ಅದರಲ್ಲೂ ನಿರ್ದೇಶಕ ಶ್ರೀರಾಮ್, "ನಾನು ಕನ್ನಡಕ್ಕೆ ಮೊದಲ ಬಾರಿಗೆ ರೆಹಮಾನ್ ಅವರನ್ನು ಕರೆತಂದಿದ್ದೇನೆ" ಎಂದಿದ್ದಾರೆ. ಆದರೆ, ಐದು ವರ್ಷಗಳ ಹಿಂದೆ ಧ್ಯಾನ್-ಶರ್ಮಿಳಾ ಮಾಂಡ್ರೆ ಜೋಡಿಯ 'ಸಜನಿ' ಚಿತ್ರ ಬಂದಾಗಲೂ ಇದೇ ರೀತಿಯಲ್ಲಿ ಪ್ರಚಾರ ಮಾಡಲಾಗಿತ್ತು.
ಇದೀಗ ತಮಿಳಿನ 'ವರಲಾರು' ಚಿತ್ರವನ್ನು ಕನ್ನಡದಲ್ಲಿ 'ಗಾಡ್‌ಫಾದರ್' ಹೆಸರಿನಲ್ಲಿ ಮಾಡಲಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ಜಯಮಾಲಾ ಮಗಳು ಸೌಂದರ್ಯಾ, ಸದಾ, ಭೂಮಿಕಾ ಚಾವ್ಲಾ ಈ ಮೂರು ನಟಿಯರು ನಾಯಕಿಯರು. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ ಎಂದು ನಿರ್ದೇಶಕ ಶ್ರೀರಾಮ್ ಸೇರಿದಂತೆ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಇದರಲ್ಲಿ ನಿಜವೆಷ್ಟು ತಿಳಿದುಕೊಳ್ಳೋಣ...
ಇದರಲ್ಲಿ 'ಅರ್ಧ ಸತ್ಯ' ಕಾಣುತ್ತಿದೆ ಎನ್ನುತ್ತವೆ ಸುದ್ದಿಮೂಲಗಳು. ಕಾರಣ, ಮೂಲ ಚಿತ್ರ 'ವರಲಾರು'ವಿಗೆ ಸಂಗೀತ ನೀಡಿದ್ದ ರೆಹಮಾನ್, ಅಲ್ಲಿರುವ ಎಂಟು ಹಾಡುಗಳಲ್ಲಿ ಹಿಟ್ ಟ್ಯೂನ್‌ಗಳನ್ನು ಹಾಗೆಯೇ ಕನ್ನಡಕ್ಕೆ ಎತ್ತಿಕೊಂಡಿದ್ದಾರೆ. ಕೆಲವು ಟ್ಯೂನ್‌ಗಳನ್ನು ಮಾತ್ರ ಕನ್ನಡಕ್ಕಾಗಿಯೇ ರೆಹಮಾನ್ ಸಂಯೋಜಿಸಿದ್ದಾರೆ. ಅಲ್ಲಿಗೆ ರೆಹಮಾನ್ ಪೂರ್ತಿಯಾಗಿ ಕನ್ನಡ ಚಿತ್ರಕ್ಕೆ ಸಂಗೀತ ನೀಡಿಲ್ಲ ಎನ್ನಬಹುದಲ್ಲವೇ? ಹೀಗಾಗಿ ಗಾಡ್ ಫಾದರ್ ಚಿತ್ರತಂಡದ ಹೇಳಿಕೆ ಅರ್ಧ ಸುಳ್ಳು ಎನ್ನಬಹುದು.

Uppi boss film nalli Namage fresh song beku .
ReplyDelete:-)
ReplyDelete