Pages

Friday, December 23, 2011

ಉಪೇಂದ್ರ ನಿರ್ದೇಶನದ ಶಿವಣ್ಣ ಚಿತ್ರಕ್ಕೆ ಕ್ಷಣಗಣನೆ


Shivraj Kumar Upendra
ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ನಟಿಸುವ ಕನಸು ಯಾರಿಗೆ ಇರೋದಿಲ್ಲ? ಉಪೇಂದ್ರ ಕನ್ನಡದ ಕ್ರಿಯೇಟಿವ್ ಡೈರೆಕ್ಟರ್ ಎಂದೇ ಹೆಸರಾದವರು. ಈ ಮೊದಲು ಉಪ್ಪಿ ನಿರ್ದೇಶನದ 'ಓಂ' ಚಿತ್ರದಲ್ಲಿ ನಟಿಸಿದ ಶಿವರಾಜ್ ಕುಮಾರ್ ಸಾಕಷ್ಟು ಬಾರಿ ಮತ್ತೆ ಉಪ್ಪಿ ನಿರ್ದೆಶನದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದರು. ಪುನೀತ್ ಕೂಡ ಆ ಆಸೆ ಹೇಳಿಕೊಂಡಿದ್ದಾರೆ.

ಇದೀಗ 'ಶ್ರೀಮುತ್ತು' ಎಂಬ ಸ್ವಂತ ಬ್ಯಾನರ್ ಪ್ರಾರಂಭಿಸಿರುವ ಶಿವಣ್ಣ, ಮೊದಲ ನಿರ್ಮಾಣವನ್ನು ತಮ್ಮ ನಟನೆ ಹಾಗೂ ಉಪ್ಪಿ ನಿರ್ದೇಶನದ ಚಿತ್ರದ ಮೂಲಕ ಮಾಡಲು ಹೊರಟಿದ್ದಾರೆ. ಸದ್ಯಕ್ಕೆ ಈ ಇಬ್ಬರ ಕೈಯಲ್ಲೂ ಸಾಕಷ್ಟು ಚಿತ್ರಗಳಿರುವುದರಿಂದ ಸ್ವಲ್ಪ ತಡವಾಗಬಹುದು. ಆದರೆ ಇನ್ನೊಂದು ತಿಂಗಳಲ್ಲಿ ಪ್ರಾರಂಭವಂತೂ ಗ್ಯಾರಂಟಿ ಎಂಬುದು ಸುದ್ದಿಮೂಲಗಳಿಂದ ಖಚಿತವಾಗಿದೆ.

ಉಪೇಂದ್ರ ಶಿವಣ್ಣನಿಗೆ ರೆಡಿ ಮಾಡಿರುವ ಕಥೆ ತೀರಾ ವಿಭಿನ್ನವಾಗಿದೆಯಂತೆ. ಶಿವಣ್ಣ ಖುಷಿಯಿಂದ ಒಪ್ಪಿಕೊಂಡಾಗಿದೆ. ಕೇವಲ ಮುಹೂರ್ತವೊಂದೇ ಬಾಕಿ. ಮುಂದಿನ ವರ್ಷದ ಪ್ರಾರಂಭದಲ್ಲೇ ಸೆಟ್ಟೇರಲಿದೆ ಚಿತ್ರ. ಶಿವಣ್ಣ-ಉಪೇಂದ್ರ ಸಂಗಮದ ಚಿತ್ರದ ಸುದ್ದಿ ಕೇಳಿ ಪ್ರೇಕ್ಷಕರು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕನ್ನಡಕ್ಕೆ ಓಂ ನಂತಹ ಮತ್ತೊಂದು ಯಶಸ್ವೀ ಚಿತ್ರ ಬರಲಿದೆ.

2 comments: