Pages

Friday, December 23, 2011

ಬುದ್ಧಿವಂತ 'ಉಪೇಂದ್ರ' ತಲೆಗೆ ಟೋಪಿ ಇಟ್ಟ ಶ್ರೀಕಾಂತ್

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಟೋಪಿವಾಲಾ ಆಗಲಿದ್ದಾರೆ. ಅವರಿಗೂ ಟೋಪಿ ಹಾಕಬಹುದೆಂದು ನಿಮಗೆಲ್ಲ ತಿಳಿಸುತ್ತಿರುವವ ನಿರ್ಮಾಪಕರು ಬೇರಾರೂ ಅಲ್ಲ, ಇದೀಗ ಶಿವಣ್ಣನ 'ಶಿವ' ಚಿತ್ರದಲ್ಲಿ ಬ್ಯುಸಿ ಆಗಿರುವ ಕೆ.ಪಿ. ಶ್ರೀಕಾಂತ್. ಶ್ರೀನಿವಾಸ್ ಅಲಿಯಾಸ್ ಶ್ರೀನಿ 'ಟೋಪಿವಾಲಾ' ಚಿತ್ರದ ನಿರ್ದೇಶಕರು.

ಬರುವ ವರ್ಷ ಜನವರಿಯಲ್ಲಿ ಈ ಚಿತ್ರಕ್ಕೆ ಮುಹೂರ್ತ ನಿಗದಿಯಾಗಿದ್ದು, ಚಿತ್ರದ ನಾಯಕಿಯಾಗಿ ಜಾಕಿ ಭಾವನಾ ಆಯ್ಕೆಯಾಗಿದ್ದಾರೆ. ಹರಿಕೃಷ್ಣ ಅವರು ಸಂಗೀತ ನಿಡಲಿದ್ದಾರೆ. ಕಥೆ ಏನು ಎಂಬುದರ ಬಗ್ಗೆ ಬಾಯಬಿಡದ ನಿರ್ಮಾಪಕ ಹಾಗೂ ನಿರ್ದೇಶಕರು, ಈ ಕಥೆ ಉಪ್ಪಿಗೆ ಸಖತ್ ಇಷ್ಟವಾಗಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಉಪೇಂದ್ರ ಚಿತ್ರಗಳು ಒಂದಾದಮೇಲೊಂದರಂತೆ ಬರುತ್ತಿವೆ. ಜಾಕಿ ಭಾವನಾ ಕನ್ನಡದಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದಾರೆ. ಒಳ್ಳೊಳ್ಳೆಯ ಚಿತ್ರಗಳು ಹರಿಕೃಷ್ಣರ ಮಡಿಲು ಸೇರುತ್ತಿವೆ. ನಿರ್ಮಾಪಕರ ಶ್ರೀಕಾಂತ್ ಸಾಲಾಗಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕನ್ನಡದಲ್ಲಿ ಹೊಸ ವರ್ಷದಲ್ಲಿ ದೊಡ್ಡ ಬ್ಯಾನರಿನ ಸಾಕಷ್ಟು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ

No comments:

Post a Comment