Pages

Monday, May 6, 2013

Upendra's Brahma first look out (photoshoot)

ಇದೇ ಮೊದಲ ಬಾರಿಗೆ ಆರ್ ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ 'ಬ್ರಹ್ಮ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರದ ಫಸ್ಟ್ ಲುಕ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಬುದ್ಧಿವಂತ ನಿರ್ದೇಶಕ ಹಾಗೂ ನಟನೊಬ್ಬನೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎನ್ನುವ ಆರ್ ಚಂದ್ರು ಅವರು, ಈ ಚಿತ್ರದ ಮೂಲಕ ಹೊಸ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ. ಚಾರ್ ಮಿನಾರ್ ಚಿತ್ರದ ಬಳಿಕ ಚಂದ್ರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಬ್ರಹ್ಮ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇದು ಕನ್ನಡ, ತೆಲುಗಿನ ದ್ವಿಭಾಷಾ ಚಿತ್ರ. 'The Leader' ಎಂಬುದು ಚಿತ್ರದ ಅಡಿಬರಹ.
ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂದಷ್ಟೇ ಹೇಳಿದ್ದಾರೆ ಚಂದ್ರು. ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ನೋಡುತ್ತಿದ್ದರೆ ಇದೊಂದು ಸೋಷಿಯೋ ಫ್ಯಾಂಟಸಿ ಚಿತ್ರ ಎಂಬ ಭಾವನೆ ಬರುತ್ತದೆ.
ಇದೇನಪ್ಪಾ ಇದು ಗೆಟಪ್? ಆದರೆ ಈ ಗೆಟಪನ್ನು ಯಾವುದಾದರೂ ಹಾಡಿನಲ್ಲೂ ಬಳಸಿಕೊಂಡಿರಬಹುದಲ್ಲವೆ? ಚಿತ್ರದ ನಾಯಕಿ ಯಾರು? ಪಾತ್ರವರ್ಗದಲ್ಲಿ ಯಾರು ಇರುತ್ತಾರೆ ಎಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕು.



ಇದೇ ಕಥೆಯನ್ನು ಆರ್ ಚಂದ್ರು ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹೇಳಿದ್ದರಂತೆ. ಆದರೆ ಅವರು ಈಗ ಟೈಮಿಲ್ಲ ಎಂದು ಹೇಳಿದ್ದರಂತೆ. ಈಗ ಅದೇ ಕಥೆಗೆ ಹೊಸ ಶೀರ್ಷಿಕೆ ಕೊಟ್ಟು ಉಪ್ಪಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಶಿವಣ್ಣ ಜೊತೆಗಿನ ಮೈಲಾರಿ ಚಿತ್ರದ ಬಳಿಕ ಚಂದ್ರು ಇದೇ ಕಥೆಯನ್ನು ಹೇಳಿ ಚಿತ್ರಕ್ಕೆ ಮಲ್ಲೇಶಿ, ದಿ ಲೀಡರ್ ಎಂದು ಹೆಸರಿಟ್ಟಿದ್ದರಂತೆ. ಆದರೆ ಕಾರಣಾಂತಗಳಿಂದ ಶಿವಣ್ಣ ಒಲ್ಲೆ ಎಂದ ಮೇಲೆ ಇದೇ ಪ್ರಾಜೆಕ್ಟ್ ಉಪ್ಪಿ ಮುಂದೆ ಬಂತು ಎಂಬ ಮಾತುಗಳು ಕೇಳಿಬರುತ್ತಿವೆ.
ಟೋಪಿವಾಲ ಚಿತ್ರದ ಬಳಿಕ ಉಪೇಂದ್ರ ಒಪ್ಪಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟೋಪಿವಾಲ ಚಿತ್ರದ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತಾದರೂ ಉಪ್ಪಿ ವೃತ್ತಿಜೀವನದಲ್ಲಿ ತಿರುವು ನೀಡುವ ಚಿತ್ರ ಎನ್ನಿಸಿಕೊಳ್ಳಲಿಲ್ಲ. ಈಗ ಬ್ರಹ್ಮ ಚಿತ್ರದ ಬಗ್ಗೆ ಅವರು ಆಸಕ್ತಿ ತೋರಿರುವುದು ಅವರ ಅಭಿಮಾನಿ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಈ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆದಿದೆ. ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿರುವುದು ವಿಶೇಷ. ಥ್ರಿಲ್ಲರ್ ಮಂಜು ಅವರ ಸಾಹಸ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.




Real Star Upendra and director R Chandru's Brahma first look has been released on internet. The first poster of the film was directly released earlier today by the filmmaker. The photoshoot of the film was held on May 4. R Chandru released the first look and wrote, "Here goes the first pic of #Bramha." In one of the posters, Uppi, Gurukiran and the director are seen. According to reports, Brahma is coming up with the tagline - The Leader. The film is simultaneously made with the budget of Rs 30 crore. Actors from Telugu and Kannada industries will be working in the project. However, it has to be noted that the project was earlier offered to Shivaraj Kumar, but he denied the film as he is busy with other films. Hence, the director approached the Real Star. While Gurukiran will be composing the music, Shekar Chandra will be handling the camera.




No comments:

Post a Comment