Pages

Monday, May 13, 2013

ಭಾರಿ ವಿವಾದದಲ್ಲಿ ಉಪೇಂದ್ರ 'ಬಸವಣ್ಣ' ಪೋಸ್ಟರ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿರುವ 'ಬಸವಣ್ಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಪೋಸ್ಟರ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಶೀರ್ಷಿಕೆಯೇನೋ 'ಬಸವಣ್ಣ' ಎಂದಿದೆ. ಆದರೆ ಅದೇ ಶೀರ್ಷಿಕೆ ಜೊತೆ ಗನ್ ಸಹ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಸವಣ್ಣ ಚಿತ್ರವನ್ನು ನಿರ್ದೇಶಿಸುತ್ತಿರುವವರು ದಂಡುಪಾಳ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸರಾಜು. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಸವ ಜಯಂತಿ (ಮೇ.13) ದಿನವೇ ಬಿಡುಗಡೆಯಾಗಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿದೆ.

ಈ ಬಗ್ಗೆ ವಿವರಣೆ ನೀಡಿರುವ ಶ್ರೀನಿವಾಸರಾಜು ಅವರು, "ಇದು ಚಿತ್ರದ ಫಸ್ಟ್ ಲುಕ್ ಅಷ್ಟೇ. ತಮ್ಮ ಚಿತ್ರಕ್ಕೂ ಬಸವಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ತಮ್ಮ ಚಿತ್ರದ ನಾಯಕನ ಹೆಸರು ಬಸವಣ್ಣ ಅಷ್ಟೇ" ಎಂದಿದ್ದಾರೆ. ಆದರೆ ಚಿತ್ರದ ಶೀರ್ಷಿಕೆಯನ್ನು 'ಬಸವಣ್ಣ' ಎಂದಿಟ್ಟಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಧ್ಯಾನಸ್ಥ ಮುದ್ರೆ, ರುದ್ರಾಕ್ಷಿ, ವಿಭೂತಿಯನ್ನೂ ತೋರಿಸಲಾಗಿದ್ದು ಇವೆಲ್ಲವೂ ಬಸವಣ್ಣನವರ ಭಕ್ತಿಭಾವಗಳನ್ನು ಪ್ರತಿನಿಧಿಸುವಂತಿವೆಯಲ್ಲಾ ಎಂದರೆ.... ಶ್ರೀನಿವಾಸರಾಜು ಹೇಳುವುದೇನೆಂದರೆ...ಇದು ಕೇವಲ ಫಸ್ಟ್ ಲುಕ್ ಅಷ್ಟೇ. ಇದನ್ನು ನೋಡಿ ಬಸವಣ್ಣನವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಚಿತ್ರ ಬಿಡುಗಡೆ ಆದ ಮೇಲೆ ವಿವಾದಿತ ಸನ್ನಿವೇಶಗಳಿದ್ದರೆ ಆಗ ಮಾತನಾಡಿ. ಈಗಲೇ ಚಿತ್ರಕಥೆ ಬಗ್ಗೆ ಮಾತನಾಡುವುದು ಬೇಡ ಎಂದಿದ್ದಾರೆ. ಚಿತ್ರದಲ್ಲಿ ಗನ್ ಇದ್ದ ಮಾತ್ರಕ್ಕೆ ಯಾಕೆ ತಪ್ಪಾಗಿ ಕಾಣಬೇಕು. ಫಸ್ಟ್ ಲುಕ್ ನೋಡಿ ಜಡ್ಜ್ ಮಾಡಬೇಡಿ. ಚಿತ್ರ ರಿಲೀಸ್ ಆಗಲಿ. ಆಗ ವಿವಾದಾತ್ಮಕ ಅನ್ನಿಸಿದರೆ ಆಗ ಮಾತನಾಡೋಣ ಎಂದಿದ್ದಾರೆ. ಶಿವ, ಗಣೇಶ, ಕೃಷ್ಣ ಎಂದಿಟ್ಟು ಅಲ್ಲೂ ಗನ್ ಮಚ್ಚು ಲಾಂಗು ಕೊಡಲ್ಲವೇ? ಹಾಗಂತ ಆ ಚಿತ್ರಗಳೆಲ್ಲವನ್ನೂ ತಪ್ಪು ಎಂದು ಹೇಳಕ್ಕಾಗುತ್ತದೆಯೇ ಎಂಬುದು ಶ್ರೀನಿವಾಸರಾಜು ಅವರ ವಿವರಣೆ.

No comments:

Post a Comment