Pages

Friday, May 25, 2012

ರೀಮೇಕ್ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಬಿಜಿ

'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಬಾರಿ ಅವರು ಮತ್ತೊಮ್ಮೆ ರೀಮೇಕ್‌ಗೆ ಶರಣೆಂದಿದ್ದಾರೆ. ತಮಿಳಿನಲ್ಲಿ ಭರ್ಜರಿ ಯಶಸ್ಸ್ಸು ದಾಖಲಿಸಿದ 'ಕಾಂಚನಾ' ಚಿತ್ರದ ರೀಮೇಕ್‌ನಲ್ಲಿ ಉಪ್ಪಿ ಈಗ ತಮ್ಮನ್ನು ತೊಡಗಿಕೊಂಡಿದ್ದಾರೆ.

ತಮಿಳು 'ಕಾಂಚನಾ' ಚಿತ್ರವನ್ನು ಡಾನ್ಸ್ ಮಾಸ್ಟರ್ ರಾಘವೇಂದ್ರ ಲಾರೆನ್ಸ್ ನಿರ್ದೇಶಿಸುವುದರ ಜೊತೆಗೆ ಅಭಿನಯಿಸಿದ್ದರು. ಲಾರೆನ್ಸ್ ಜೊತೆ ಬೆಳಗಾವಿ ಬಾಲೆ ಲಕ್ಷ್ಮಿ ರೈ ಹೆಜ್ಜೆ ಹಾಕಿದ್ದರು. ಕನ್ನಡದ ಚಿತ್ರಕ್ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರು ಮಹಾಲಕ್ಷ್ಮಿ ಬಡಾವಣೆಯ ಚೆನ್ನಮ್ಮನಕೆರೆ ಮೈದಾನದಲ್ಲಿ ನಡೆಯಿತು. ಮೂಲ ಚಿತ್ರಕ್ಕೆ ಹೋಲಿಸಿದರೆ ಕನ್ನಡದ 'ಕಲ್ಪನಾ' ಚಿತ್ರದ ಬಜೆಟ್ ಸಿಕ್ಕಾಪಟ್ಟೆ ಜಾಸ್ತಿ ಎನ್ನುತ್ತಾರೆ ರಾಮ್ ನಾರಾಯಣ್.

ಚಿತ್ರದಲ್ಲಿ ಶ್ರುತಿ ಅವರು ಮುಖ್ಯಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ಉಳಿದಂತೆ ಸಾಯಿಕುಮಾರ್, ಸಾಧು ಕೋಕಿಲ, ಶೋಭರಾಜ್, ಅಚ್ಯುತರಾವ್ ಮುಂತಾದವರ ತಾರಾಬಳಗವಿದೆ. ಸಂಗೀತ ವಿ ಹರಿಕೃಷ್ಣ, ಸೆಲ್ವರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ರಾಘವೇಂದ್ರ ಲಾರೆನ್ಸ್ ಕೂಡ ಚಿತ್ರದಲ್ಲಿ ಕಾಣಿಸಲಿದ್ದಾರೆ.

No comments:

Post a Comment