Pages

Tuesday, May 15, 2012

ಕಠಾರಿವೀರನಿಗೆ ಪವರ್ ಸ್ಟಾರ್ ಪುನೀತ್ ಕ್ಲೀನ್ ಬೌಲ್ಡ್

'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಬಗ್ಗೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದ ಮೊಟ್ಟ ಮೊದಲ ಸಂಪೂರ್ಣ ತ್ರೀಡಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಚಿತ್ರೋದ್ಯಮವೂ ಬೆನ್ನುತಟ್ಟಿ ಪ್ರೋತ್ಸಾಹಿಸಿದೆ. ಚಿತ್ರತಂಡದ ಪ್ರಯತ್ನಕ್ಕೆ ಕನ್ನಡ ಚಿತ್ರೋದ್ಯಮ ಮೆಚ್ಚುಗೆ ವ್ಯಕ್ತಪಡಿಸಿದೆ.

ಇತ್ತೀಚೆಗೆ ಈ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವೀಕ್ಷಿಸಿದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟಿಸಿ ಕಠಾರಿವೀರನನ್ನು ಹಾಡಿ ಹೊಗಳಿದ್ದಾರೆ. "I think new era has been started with KVSS's 3D technique in sandalwood.. Great, effort" ಎಂದಿದ್ದಾರೆ.

ಉಪೇಂದ್ರ ಅಭಿನಯದ 'ಸೂಪರ್' ಚಿತ್ರದ ಮೊದಲ ನಾಲ್ಕು ದಿನದ ಗಳಿಕೆಗೆ ಹೋಲಿಸಿದರೆ 'ಕಠಾರಿವೀರ' ಒಂದು ಕೈ ಮೇಲಿದ್ದಾನೆ. ಐತಿಹಾಸಿಕ ಕಾಲ್ಪನಿಕ ಚಿತ್ರವಾದ ಕಠಾರಿವೀರವನ್ನು ಮುನಿರತ್ನ ಭಾರಿ ಬಜೆಟ್‌ನಲ್ಲಿ ನಿರ್ಮಿಸಿರುವುದು ಗೊತ್ತೇ ಇದೆ. ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಪ್ರೇಕ್ಷಕರು ' ಕಠಾರಿವೀರ'ನನ್ನು ಮುಗಿಬಿದ್ದು ನೋಡುತ್ತಿದ್ದಾರೆ.

2 comments: