Pages

Tuesday, May 15, 2012

ಕಠಾರಿವೀರ ವಾರಾಂತ್ಯದ ಗಳಿಕೆ; ನೋಡಿ ಆನಂದಿಸಿ

ಸದ್ಯಕ್ಕೆ ವಿವಾದಾತ್ಮಕ ಚಿತ್ರವೆಂಬ ಹಣೆಪಟ್ಟಿ ಹೊತ್ತಿರುವ ಕಠಾರಿವೀರ ಸುರಸುಂದರಾಂಗಿ ಪ್ರೇಕ್ಷಕರಿಂದ ಗಳಿಸಿರುವ ಮಿಶ್ರ ಪ್ರತಿಕ್ರಿಯೆ ನಡುವೆಯೂ ಉತ್ತಮ ಬಾಕ್ಸ್ ಆಫೀಸ್ ಗಳಿಕೆ ದಾಖಲಿಸಿದೆ. ಮೊದಲ ವಾರದಲ್ಲಿ ಸುಮಾರು 5.7 ಕೋಟಿ ರು. ಗಳಿಸಿ ಎಲ್ಲರ ಹುಬ್ಬೇರಿಸಿದೆ. ಕಳೆದ ವಾರ, ಮೇ 10ಕ್ಕೆ ಬಿಡುಗಡೆಯಾಗಿರುವ ಕಠಾರಿವೀರ '3ಡಿ' ಚಿತ್ರಕ್ಕೆ ಇಲ್ಲಿಯವರೆಗಿನ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದೆ.

12 ಕೋಟಿ ರು ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿರುವವರು ಈ ಮೊದಲು ರಕ್ತಕಣ್ಣೀರು ನಿರ್ಮಿಸಿದ್ದ ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ಮುನಿರತ್ನ. ಬರೋಬ್ಬರಿ 12 ಕೋಟಿ ರು ಖರ್ಚು ಮಾಡಿ ಸಿನಿಮಾ ಮಾಡಿದ ಅವರು ಸಹಜವಾಗಿಯೇ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇದೇ ರೀತಿ ಗಳಿಕೆಯಿದ್ದರೆ ಎರಡನೇ ವಾರಾಂತ್ಯದ ಹೊತ್ತಿಗೆ ಹಾಕಿದ ಬಂಡವಾಳ ವಾಪಸ್ ಆಗಿ ಮುನಿರತ್ನ ಮುಖದಲ್ಲಿ ಮಂದಹಾಸ ಖಾತ್ರಿ.

ಬಿಡುಗಡೆಗೆ ಸಿದ್ಧವಾದಾಗಿನಿಂದಲೂ ಒಂದಲ್ಲ ಒಂದು ವಿವಾದಕ್ಕೆ ಅಂಟಿಕೊಂಡೇ ಇರುವ ಈ ಚಿತ್ರ ಬಿಡುಗಡೆಯ ನಂತರವಂತೂ ಇನ್ನೂ ವಿವಾದಕ್ಕೆ ತುತ್ತಾಗಿದೆ. ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಚಿತ್ರದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆಗೂ ಸಿಲುಕಿರುವ ಕಠಾರಿವೀರದ ಮುಂದಿನ ಪ್ರಯಾಣ ಹೇಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

No comments:

Post a Comment