Pages

Monday, May 14, 2012

ಉಪ್ಪಿ 'ಕಠಾರಿವೀರ'ನಿಗೆ ಎಂಟು ಕಡೆ ಕತ್ತರಿ ಪ್ರಯೋಗ

ಉಪೇಂದ್ರ, ರಮ್ಯಾ ಮುಖ್ಯಭೂಮಿಕೆಯಲ್ಲಿರುವ ' ಕಠಾರಿವೀರ ಸುರಸುಂದರಾಂಗಿ' ಚಿತ್ರದ ಕೆಲವು ಆಕ್ಷೇಪಾರ್ಹ ದೃಶ್ಯಗಳಿಗೆ ಶೀಘ್ರದಲ್ಲೇ ಕತ್ತರಿಬೀಳಲಿದೆ. ಚಿತ್ರದಲ್ಲಿ ಹಿಂದೂ ದೇವಾನು ದೇವತೆಗಳನ್ನು ಅವಹೇಳನ ಮಾಡಲಾಗಿದೆ ಎಂದು ಹಿಂದೂ ಪರ ಸಂಘಟೆನೆಗಳು ಚಿತ್ರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಚಿತ್ರದಲ್ಲಿನ ಎಂಟು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಚಿತ್ರದ ನಿರ್ಮಾಪಕ ಮುನಿರತ್ನ ಸಮ್ಮತಿಸಿರುವುದಾಗಿ ತಿಳಿಸಿದರು. ಇದು ಹಿಂದೂ ಪರ ಸಂಘಟನೆಗಳಿಗೆ ಸಂದ ಜಯ ಎಂದು ಮುತಾಲಿಕ್ ಬಣ್ಣಿಸಿದರು.

ಚಿತ್ರದ ಪರಿಷ್ಕೃತ ಆವೃತ್ತಿಯನ್ನು ಗುರುವಾರ (ಮೇ 17) ಮಠಾಧೀಶರು ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ವೀಕ್ಷಿಸಲು ಅವಕಾಶ ಮಾಡಿಕೊಡಬೇಕು. ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದಿದ್ದರೆ ರಾಜ್ಯದಾದ್ಯಂತ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ ಮುತಾಲಿಕ್.

No comments:

Post a Comment