Pages

Sunday, May 13, 2012

ಮುನಿರತ್ನ ಹಾಗೂ ’ಬಜರಂಗದಳ’ದ ನಡುವಿನ ಸಂಧಾನ ವಿಫಲ.





’ಕಠಾರಿವೀರ ಸುರ ಸುಂದರಾಂಗಿ’ ಚಿತ್ರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಲಾಗಿದೆ ಎಂಬ ವಿಷಯಕ್ಕಾಗಿ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು. ಈ ಸಲುವಾಗಿ ಚಿತ್ರ ನಿರ್ಮಾಪಕ ಮುನಿರತ್ನ ಹಾಗೂ ’ಬಜರಂಗದಳ’ ಸಂಘಟನೆ ನಡುವೆ ಸಂಧಾನಕ್ಕಾಗಿ ಸಭೆ ಕರೆದಿತ್ತು. ಆದರೆ ಈ ಸಂಧಾನ ಈಗ ವಿಫಲವಾಗಿದೆ.
ಚಿತದಲ್ಲಿರುವ ಹಲವು ದೃಶ್ಯ ಗಳನ್ನು ತೆಗೆದು ಹಾಕಬೇಕು ಎನ್ನುವುದು ’ಬಜದರಂಗ ದಳ’ ಬೇಡಿಕೆಗೆ ಮುನಿರತ್ನ ಮುಂದಿನ ಒಂದು ವಾರ ಚಿತ್ರಪ್ರದರ್ಶನಕ್ಕೆ ಅವಕಾಶ ನೀಡಬೇಕು. ಅಷ್ಟರಲ್ಲಿ ಅವಹೇಳನಕಾರಿ ದೃಶ್ಯಗಳನ್ನು ತೆಗೆದುಹಾಕುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದ ಬಜರಂಗದಳದ ಸಂಘಟಕರು ನಾಳೆಯಿಂದ ರಾಜ್ಯದಾದ್ಯಂತ ಚಿತ್ರ ಪ್ರದರ್ಶನಕ್ಕೆ ತಡೆ ಹಾಕಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ’ಕಠಾರಿವೀರ’ ಹಾಗೂ ’ಬಜರಂಗದಳ’ ಸಂಘತನೆ ನಡುವಿನ ಸಂಧಾನ ಸಂಪೂರ್ಣ ವಿಫಲವಾಗಿದೆ

No comments:

Post a Comment