Pages

Tuesday, January 24, 2012

ಗಾಂಧಿನಗರದಲ್ಲಿ ಉಪೇಂದ್ರ ಆರಕ್ಷಕ ಗುಟ್ಟು ರಟ್ಟು



ಗುರುವಾರ, 26 ಜನವರಿ 2012ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಆರಕ್ಷಕ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿವೆ. ಕಾರಣ ಬಿಡುಗಡೆಯಾದ ಸಿನಿಮಾ ಪೋಸ್ಟರ್ ಮತ್ತು ಪ್ರೋಮೋಗಳು. ಸುದ್ದಿಮೂಲಗಳ ಪ್ರಕಾರ ಉಪೇಂದ್ರ ಈ ಚಿತ್ರದಲ್ಲಿ ಅವಳಿ-ಜವಳಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆ ಪಾತ್ರಗಳಲ್ಲಿ ಅಣ್ಣ ಪೊಲೀಸ್ ಹಾಗೂ ತಮ್ಮ ಮಾನಸಿಕ ರೋಗಿ ಎಂಬ ಗುಟ್ಟು ಗಾಂಧಿನಗರದ ಮಂದಿಯಿಂದ ರಟ್ಟಾಗಿದೆ. ಇದೇ ನಿಜವಾಗಿರಬಹುದು ಎಂಬುದಕ್ಕೆ ಬಲವಾದ ಸಾಕ್ಷಿ ಮತ್ತೆ ಅದೇ ಪೋಸ್ಟರ್ ಹಾಗೂ ಪ್ರೋಮೋ. ಎರಡೂ ಪಾತ್ರಗಳಲ್ಲಿ ಸಖತ್ ಮಿಂಚಿದ್ದಾರಂತೆ ರಿಯಲ್ ಸ್ಟಾರ್ ಉಪ್ಪಿ.

ಇದೇ ಸುದ್ದಿಯ ಬಗ್ಗೆ ಉಪೇಂದ್ರ ಹಾಗೂ ನಿರ್ದೆಶಕ ವಾಸು ಕೇಳಿದಾಗ, ಅವರು ಇದನ್ನು ಹೌದೆಂದಾಗಲೀ ಅಲ್ಲವೆಂದಾಗಲೀ ಹೇಳುತ್ತಿಲ್ಲ. ಬದಲಿಗೆ ನಾವು ಹೇಳದಿದ್ದರೂ ಕೆಲವೊಂದು ವಿಷಯ ಅದ್ಹೇಗೋ ಲೀಕ್ ಆಗುತ್ತಲ್ಲಾ..! ಎಂಬಂತೆ ಒಬ್ಬರ ಮುಖವನ್ನೊಬ್ಬರು ನೋಡಿ ನಗುತ್ತಾರೆ. ಅರ್ಥವಾಯಿತಲ್ಲವೇ? ಆದರೂ ಸಿನಿಮಾ ನೋಡಿದ ಮೇಲೆಯೇ ಖಾತ್ರಿಯಾಗುವುದು ಖಂಡಿತ.

No comments:

Post a Comment