Pages

Tuesday, January 24, 2012

ಉಪ್ಪಿ ಆಕ್ಷನ್ ಕಟ್ ನಲ್ಲಿ ಮತ್ತೊಂದು ಉಪೇಂದ್ರ

ಉಪ್ಪಿ ಅಭಿಮಾನಿಗಳಿಗೆ ಸಕ್ಕರೆಯಂಥ ಸುದ್ದಿ. ಕಾರಣ ರಿಯಲ್ ಸ್ಟಾರ್ ಉಪೇಂದ್ರ "ಉಪೇಂದ್ರ ಭಾಗ-2" ಚಿತ್ರ ಮಾಡುವ ಬಗ್ಗೆ ತಯಾರಿ ನಡೆಸುತ್ತಿದ್ದಾರೆ. 1999ರಲ್ಲಿ ಬಿಡುಗಡೆಯಾಗಿ ಭಾರಿ ಸಂಚಲನವನ್ನೇ ಸೃಷ್ಟಿಸಿದ್ದ ಚಿತ್ರ ಉಪೇಂದ್ರ, ಇದೀಗ ಭಾಗ 2 ರಲ್ಲಿ ಮುಂದುವರಿಯಲಿದೆ. ಆ ಚಿತ್ರಕ್ಕೆ ಹೊಂದಿಕೆಯಾಗುವಂತ ಕಥೆ ಎಳೆಯೊಂದನ್ನು ಯೋಚಿಸಿ ಬೆಳೆಸಿರುವ ಉಪ್ಪಿ, ಅದನ್ನು ಸೀರಿಯಸ್ಸಾಗಿ ಚಿತ್ರಕಥೆ ಮಾಡುತ್ತಿದ್ದಾರಂತೆ. ಈಗಷ್ಟೇ ತೆರೆದಿರುವ ಉಪ್ಪಿ ಟ್ವಿಟ್ಟರ್ ಖಾತೆಯಿಂದ ಇದು ಬಹಿರಂಗಗೊಂಡಿದೆ.

ಅಂದ್ರೆ ಉಪ್ಪಿ ಅಭಿಮಾನಿಗಳಿಗೆ ಇದು ದೊಡ್ಡ ಬ್ರೇಕಿಂಗ್ ನ್ಯೂಸ್. ಅವರ ನಿರ್ದೇಶನದ, ಅದರಲ್ಲೂ ಸೂಪರ್ ನಂತರ ಉಪ್ಪಿ ಕಥೆ, ನಿರ್ದೇಶನದ ಯಾವೊಂದು ಚಿತ್ರವೂ ತೆರೆಗೆ ಬಂದಿಲ್ಲ. ಈಗ ಸಾಲುಸಾಲು ರೀಮೇಕ್ ಚಿತ್ರಗಳ ಸರದಾರನಾಗಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಉಪ್ಪಿ. ಅವರ ಅಭಿಮಾನಿಗಳಿಗೆ ಉಪ್ಪಿ ಶೈಲಿಯ ಸಿನಿಮಾ ಮಾತ್ರ ಇಷ್ಟವಾಗುವುದು ಸಹಜ, ಅದಕ್ಕಾಗಿ ಕಾಯುತ್ತಿದ್ದವರು ಈಗ ನಿರಾಳ.

ಈ ಮಾತು ಕೇಳುತ್ತಿದ್ದಂತೆ ಉಪ್ಪಿ ಅಭಿಮಾನಿಗಳು ಪುಳಕಗೊಂಡಿದ್ದಾರೆ. ಉಪೇಂದ್ರ ಜೊತೆ ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ತಾರಾಗಣದ ಈ ಚಿತ್ರ, ಜನಪ್ರಿಯತೆ ಜೊತೆಗೆ ಸ್ತ್ರೀಯರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಟೀಕೆಗೂ ಗುರಿಯಾಗಿತ್ತು. ಈಗ ತುಂಬಾ ಬುದ್ಧಿವಂತ ಎನಿಸಿಕೊಂಡಿರುವ ಉಪ್ಪಿ ಟೀಕೆಗೆ ಗುರಿಯಾಗದಂತೆ ಕಥೆ ಮಾಡಬಹುದೆಂಬುದು ಗಾಂದಿನಗರದ ಪಂಡಿತರ ಲೆಕ್ಕಾಚಾರ.

No comments:

Post a Comment