Pages

Wednesday, January 4, 2012

ನಿರ್ದೇಶಕರಿಗೆ ಕಿರಿಕಿರಿ ಮಾಡದ ರಿಯಲ್ ಉಪೇಂದ್ರ


ರಿಯಲ್ ಸ್ಟಾರ್ ಉಪೇಂದ್ರ ವೃತ್ತಿಪರತೆ ಗುಟ್ಟುಅದಕ್ಕೆ ಉಪ್ಪಿ ಕೊಡುವ ಕಾರಣ ನೇರ ಹಾಗೂ ಸ್ಪಷ್ಟ. "ನಾನು ನಿರ್ದೇಶನ ಮಾಡುವಾಗ ಸಿನಿಮಾ ಹೇಗೆ ಬರಬೇಕು ಎಂಬ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರುತ್ತೇನೆ. ಅದಕ್ಕೆ ತಕ್ಕಂತೆ ಕಲಾವಿದರಿಂದ ಕೆಲಸ ಮಾಡಿಸುತ್ತೇನೆ. ನಾನು ನಟಿಸುವಾಗಲೂ ಅಷ್ಟೇ, ನನಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕರ ಕಲ್ಪನೆಯಂತೆ ಚಿತ್ರ ಮೂಡಿಬರಬೇಕಾದರೆ ಅವರು ಹೇಳಿದಂತೆ ನಟಿಸುವುದಷ್ಟೇ ನನ್ನ ಕೆಲಸ.

ನಿರ್ದೇಶಕರಿಗೆ ಅವರ ಕೆಲಸಕ್ಕೆ ನಾನು ಸಲಹೆ ನೀಡುವುದು, ಅನಗತ್ಯ ಕಿರಿಕಿರಿ ತರುವುದು ಮುಂತಾದವುಗಳನ್ನು ನಾನು ಮಾಡುವುದಿಲ್ಲ. ನಾನು ನಟಿಸುವಾಗ ನನ್ನೊಳಗಿನ ನಿರ್ದೇಶಕ ಮಲಗಿ ನಿದ್ರಿಸುತ್ತಿರುತ್ತಾನೆ. ಆಗ ನಾನು ಕೇವಲ ನಿರ್ದೇಶಕರ ನಟ" ಎಂದಿದ್ದಾರೆ. ಇಂತಹ ಸರಳ ವ್ಯಕ್ತಿತ್ವ ಹಾಗೂ ಬುದ್ಧಿವಂತಿಕೆಯ ನಡೆಗಳೇ ಅವರನ್ನೊಬ್ಬ ಸೂಪರ್ ಸ್ಟಾರ್ ಮಾಡಿರುವ ಸೀಕ್ರೆಟ್.

ಇಂತಹ ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಈಗ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ. ಆರಕ್ಷಕ ಇದೇ ತಿಂಗಳು 20ಕ್ಕೆ ಬಿಡುಗಡೆಯಾಗುತ್ತಿದೆ. ಕಠಾರಿವೀರ ಸುರಸುಂದರಾಂಗಿ, ಭೀಮೂಸ್ ಬ್ಯಾಂಗ್ ಕಿಡ್ಸ್ ಚಿತ್ರಗಳು ಬಿಡುಗಡೆ ಆಗಬೇಕಿದೆ. ಜೊತೆಗೆ 'ಕಲ್ಪನಾ' ಚಿತ್ರ ಚಿತ್ರೀಕರಣ ನಡೆಯುತ್ತಿದೆ. ಸದ್ಯದಲ್ಲೇ ಶಿವರಾಜ್ ಕುಮಾರ್ ಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.

No comments:

Post a Comment