Pages

Wednesday, January 4, 2012

ರಿಯಲ್ ಸ್ಟಾರ್ ಉಪೇಂದ್ರ ಎತ್ತರಕ್ಕೇರಿದ ಗುಟ್ಟು

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರಿಗೆ 'ರಿಯಲ್ ಸ್ಟಾರ್' ಅನ್ನುವ ಮಾತು ಪಕ್ಕಾ ಅನ್ವಯಿಸುವಂತಿದೆ. ಕಾರಣ ಸ್ವಪ್ರಯತ್ನ ಮತ್ತು ಹೊಸತನದಲ್ಲಿ ಸದಾ ನಂಬಿಕೆ. ಕಥೆ, ನಟನೆ, ನಿರ್ದೇಶನ, ಸಾಹಿತ್ಯ, ಹಾಡುಗಾರಿಕೆ ಹೀಗೆ ಎಲ್ಲಾ ವಿಭಾಗಗಳಲ್ಲೂ ಉಪ್ಪಿಯದು ಎತ್ತಿದ ಕೈ.

ಉಪ್ಪಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಜಾಯಮಾನ ಅವರದು. ಅದರಲ್ಲೂ ಅವರೇ ನಿರ್ದೆಶಿಸಿ ನಟಿಸಿರುವ ಚಿತ್ರಗಳಿಗೆ ಈ ಮಾತು ಪಕ್ಕಾ ಅನ್ವಯಿಸುತ್ತದೆ. ಸೂಪರ್ ಅದಕ್ಕೆ ಇತ್ತೀಚಿನ ಸಾಕ್ಷಿ. ಆದರೆ ಉಪೇಂದ್ರ ನಟನೆಯ ಚಿತ್ರಗಳೆಲ್ಲವೂ ಸಕ್ಸಸ್ ಆಗಿದೆ, ಆಗುತ್ತದೆ ಎಂದು ಹೇಳಲಾಗದು.

ಈ ಎಲ್ಲ ವಿಷಯಗಳ ಹಿಂದೆ ಉಪೇಂದ್ರತನವಿದೆ, ಒಂದು ಸ್ಪಷ್ಟ ಕಾರಣವಿದೆ. ಬೇರೆಯವರ ನಿರ್ದೇಶನದಲ್ಲಿ ನಟಿಸುವಾಗ ಉಪ್ಪಿ ನಿರ್ದೇಶನದತ್ತ ತಲೆಯನ್ನೇ ಹಾಕುವುದಿಲ್ಲವಂತೆ. ಅವರಿಗೆ ಬೇರೆಯವರ ಬಗ್ಗೆ ಇರುವ ಕಾಳಜಿ ಹಾಗೂ ಕ್ರಿಯೆಟಿವ್ ವ್ಯಕ್ತಿಯೊಬ್ಬರಿಗೆ ಇರಲೇಬೇಕಾದ ಸ್ವಾತಂತ್ರ್ಯದ ಅರಿವು ಎಷ್ಟಿದೆ ಎಂಬುದು ಅವರ ಮಾತಿನಿಂದ ವ್ಯಕ್ತವಾಗುತ್ತದೆ

No comments:

Post a Comment