Pages

Wednesday, September 21, 2011

ಅಜ್ಜ, ನಿಮ್ಮ ಪಿಂಚಣಿ ಸಿಕ್ತಾ? ಉಪೇಂದ್ರ ತೆಗೆಸಿ ಕೊಟ್ರಾ?



ಸ್ಯಾಂಡಲ್‌ವುಡ್‌ನ ಅಚ್ಚರಿ ಉಪೇಂದ್ರ ದಶಕದ ನಂತರ ನಿರ್ದೇಶಿಸಿದ 'ಸೂಪರ್' ಗಲ್ಲಾಪೆಟ್ಟಿಗೆಯನ್ನು ದೋಚುತ್ತಿದೆ. ಬಹುತೇಕ ಮಂದಿ ಮೆಚ್ಚಿ ಬೆನ್ನು ತಟ್ಟುತ್ತಿರುವ ಚಿತ್ರದಲ್ಲಿ ಒಂದಾಗಿರುವ ಇದರಲ್ಲಿನ ಚಿಕ್ಕ, ಆದರೆ ಪ್ರಮುಖ ಪಾತ್ರದಲ್ಲಿ ನಟಿಸಿದ ಅಜ್ಜ ಈಗ ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಟ್ಟಿದ್ದಾರೆ. ಅವರೇ ಶಿವಣ್ಣ.

ನಾಯಕಿಯ ಸವಾಲನ್ನು ಎದುರಿಸಲು ಭಾರತಕ್ಕೆ ಬಂದ ಸಂದರ್ಭದಲ್ಲಿ ನಾಯಕ ನೋಡುವ ದೇಶದ ಪರಿಸ್ಥಿತಿಯದು. ಒಬ್ಬ ನಿವೃತ್ತ ನೌಕರ ತನ್ನ ಪಿಂಚಣಿ ಹಣ ಪಡೆಯಲು ಲಂಚ ಕೊಡಬೇಕಾದ ಸಂದರ್ಭದಲ್ಲಿ 'ಏನೂ ಇಲ್ಲ. ಉಳಿದಿರುವುದು ಇದೊಂದೇ ಅಂಗಿ. ಅದನ್ನು ತೆಗೆದುಕೋ' ಎಂದು ಬಿಚ್ಚಿ ಕೊಡುವ ದೃಶ್ಯದಲ್ಲಿ ಹಿರಿಯ ನಾಗರಿಕ ಶಿವಣ್ಣ ನಟಿಸಿದ್ದರು.





PR




ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಲೈಬ್ರೆರಿಯನ್ ಆಗಿ ರಿಟೈರ್ಡ್ ಆದವರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ತನ್ನ ಪಾತ್ರವನ್ನು ಜನಮೆಚ್ಚುವ ಹಾಗೆ ಅಚ್ಚುಕಟ್ಟಾಗಿ ನಟಿಸಿದ್ದಾರೆ ಎನ್ನುವ ಮೆಚ್ಚುಗೆ ಅವರಿಗೆ ಸಿಕ್ಕಿದೆ.




ಈಗ ಈ ಅಜ್ಜನನ್ನು ತನ್ನ ಬಡಾವಣೆಯ ಜನ ಹಾಗೂ ಇವರು ಹೋದಲ್ಲೆಲ್ಲ, 'ಅಜ್ಜ ನಿಮ್ಮ ಪೆನ್ಷನ್ ಸಿಕ್ತಾ, ಉಪ್ಪಿ ತೆಗೆಸಿಕೊಟ್ರಾ?' ಎಂದು ಕೇಳುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದಾರೆ. ಸದ್ಯಕ್ಕೆ ಇವರಿಗೆ ಫುಲ್ ಡಿಮ್ಯಾಂಡ್ ಕೂಡ ಇದೆ!




ಇತ್ತೀಚೆಗೆ ಇವರಿಗಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಉಪೇಂದ್ರ ಕೂಡ ಭಾಗವಹಿಸಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವೊಂದನ್ನು ಬಿಟ್ಟು, 'ಸೂಪರ್' ಚಿತ್ರದ ಇವರ ನಟನೆ, ಅವಕಾಶ ಸಿಕ್ಕ ಬಗ್ಗೆಯೇ ಅಜ್ಜ ಮಾತನಾಡಿದರಂತೆ. ಸುಮಾರು 100ಕ್ಕೂ ಹೆಚ್ಚು ಫೋನ್ ಕರೆಗಳು ಬಂದಿವೆ. ಅದಕ್ಕೆ ಕಾರಣ 'ಸೂಪರ್' ಚಿತ್ರ ಎಂದು ಹೇಳಿಕೊಂಡಿದ್ದಾರೆ.




76 ವರ್ಷದ ಶಿವಣ್ಣ ಹಿಂದೆ ವಿಷ್ಣುವರ್ಧನ್ ಅವರ ಚಿತ್ರವೊಂದರ ದೃಶ್ಯದಲ್ಲಿ ಕಾಣಿಸಿಕೊಂಡವರು. ಈಗ ರಿಯಲ್ ಸ್ಟಾರ್ ಉಪೇಂದ್ರ ಒಳ್ಳೆಯ ಪಾತ್ರ ನೀಡಿದ್ದಾರೆ. ಜನ ಗುರುತಿಸುವಂತೆ ಮಾಡಿದ್ದಾರೆ. ಅದಕ್ಕೆ ತುಂಬಾ ಸಂತೋಷವಾಗಿದೆ ಎಂದು ಉಬ್ಬಿದ್ದಾರೆ ಶಿವಣ್ಣ

No comments:

Post a Comment