Pages

Wednesday, December 11, 2013

ರಿಯಲ್ ಸ್ಟಾರ್ ಉಪ್ಪಿ ಕಿರಿಕ್ ಮಾಡಿದ್ಯಾಕೆ ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚೆಗೆ 'ಟೋಪಿವಾಲ' ಡಬ್ಬಿಂಗ್ ರೈಟ್ಸ್ ವಿಷಯದಲ್ಲಿ ಕಿರಿಕ್ ಮಾಡಿಕೊಂಡರು. ಇಲ್ಲಿ ಕಥೆ ಮತ್ತು ಸಂಭಾಷಣೆ ಬರೆದಿದ್ದ ಉಪ್ಪಿಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ರ ವರ್ತನೆಯಿಂದ ಬೇಸರವಾಗಿತ್ತು. ಆದರೆ ಈಗ ಉಪ್ಪಿ ಕಿರಿಕ್ ತೆಗೆದಿದ್ಯಾಕೆ ಅನ್ನೋ ವಿಷಯ ಬಹಿರಂಗವಾಗಿದೆ. ಸಾಮಾನ್ಯವಾಗಿ ರಿಯಲ್ ಸ್ಟಾರ್ ಉಪ್ಪಿ ವಿವಾದಗಳಿಂದ ಒಂದು ಅಂತರ ಕಾಪಾಡಿಕೊಂಡೇ ಬಂದಿದ್ದಾರೆ. ಆದರೆ ಈ ವಿಷಯದಲ್ಲಿ ಮಾತ್ರ ಉಪ್ಪಿ ಗರಂ ಆಗಿದ್ರು. ಇದರ ಹಿಂದೆ ಉಪ್ಪಿಯವರ ಮನಸ್ಸಲ್ಲಿ ಇದ್ದಿದ್ದು ಇಂಡಸ್ಟ್ರಿಗೆ ಎಂಟ್ರಿಕೊಡೋ ಹೊಸ ಪ್ರತಿಭೆಗಳ ಬಗ್ಗೆ ಕಾಳಜಿ.
ಯಾಕಂದ್ರೆ ನಿರ್ಮಾಪಕರು ಹೊಸಬರು ಅಂದ್ರೆ ಅವರನ್ನ ಹೇಗೆ ಬೇಕಾದ್ರೂ ವಂಚಿಸಿ ಬಿಡ್ತಾರೆ. ಕಥೆ ಮತ್ತು ಸಂಬಾಷಣೆ ಬರೆಸಿಕೊಂಡು ಕೈಗೊಂದಿಷ್ಟು ಕಾಸುಕೊಟ್ಟು, ಇಲ್ಲ ಉಂಡೇನಾಮ ತಿಕ್ಕಿ ಅದನ್ನ ಯಾವ ಭಾಷೆಗೆ ಬೇಕಾದ್ರೂ ಮೂಲ ಕಥೆಗಾರನ ಅನುಮತಿ ಇಲ್ಲದೆ ಬಳಸಿಕೊಂಡುಬಿಡ್ತಾರೆ.
ಈ ವಿಷಯದ ಬಗ್ಗೆ ತಲೆಕೆಡಿಸಿಕೊಂಡಿರೋ ಉಪ್ಪಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಾಗ ನಾನೂ ಹೊಸಬ. ಹೊಸಬರು ಪಡೋ ಕಷ್ಟಗಳು ನನಗೆ ಗೊತ್ತು. ಹಾಗಾಗಿ ಇನ್ನು ಎಂಟ್ರಿಕೊಡೋ ಹೊಸ ಪ್ರತಿಭೆಗಳಿಗೆ ಅನ್ಯಾಯ ಆಗ್ಬಾರ್ದು ಅಂತ ಈ ಕಿರಿಕ್ ಮಾಡಿದ್ರಂತೆ. ಉಪ್ಪಿಯವರ ಈ ಕಿರಿಕ್ ನಿಂದ ಏನಾದ್ರೂ ಕ್ರಾಂತಿಯಾದರೆ ಹೊಸ ಪ್ರತಿಭೆಗಳಿಗೆ ಅನುಕೂಲ ಅಲ್ವಾ. ಏನೂ ಅಗದಿದ್ರೂ ಕೊನೆಗೆ ಉಪ್ಪಿ ಇದೇ ವಿಷಯವನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿಬಿಡ್ತಾರೇನೋ ಯಾರಿಗ್ ಗೊತ್ತು.

No comments:

Post a Comment