Pages

Thursday, June 13, 2013

ಉಪೇಂದ್ರ ವಿವಾದಾತ್ಮಕ ಚಿತ್ರ ಬಸವಣ್ಣ ಆರಂಭ

ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಬಸವಣ್ಣ ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ಚಿತ್ರದ ಪೋಸ್ಟರ್ ಭಾರಿ ವಿವಾದಕ್ಕೆ ಗುರಿಯಾಗಿದ್ದು ಗೊತ್ತೇ ಇದೆ. ದಂಡುಪಾಳ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಬಸವನಗುಡಿ ಬುಲ್ ಟೆಂಪಲ್ ರಸ್ತೆಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಮಾಧ್ಯಮಗಳ ಅನುಪಸ್ಥಿತಿಯಲ್ಲಿ ನೆರವೇರಿದೆ. ಬಸವಣ್ಣ ಚಿತ್ರಕ್ಕೆ ರಾಗಿಣಿ ದ್ವಿವೇದಿ ನಾಯಕಿ ಎನ್ನಲಾಗಿದೆ. ಆದರೆ ಈ ಚಿತ್ರ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಅವರ ಕುರಿತಾದದ್ದು ಅಲ್ಲ ಎನ್ನುತ್ತವೆ ಮೂಲಗಳು.

ತಮ್ಮ ಚಿತ್ರಕ್ಕೂ ಬಸವಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ತಮ್ಮ ಚಿತ್ರದ ನಾಯಕನ ಹೆಸರು ಬಸವಣ್ಣ ಅಷ್ಟೇ. ಚಿತ್ರದ ಪೋಸ್ಟರ್ ಗಳನ್ನು ನೋಡಿ ಬಸವಣ್ಣನವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಚಿತ್ರ ಬಿಡುಗಡೆ ಆದ ಮೇಲೆ ವಿವಾದಿತ ಸನ್ನಿವೇಶಗಳಿದ್ದರೆ ಆಗ ಮಾತನಾಡಿ. ಈಗಲೇ ಚಿತ್ರಕಥೆ ಬಗ್ಗೆ ಮಾತನಾಡುವುದು ಬೇಡ ಎಂದಿದ್ದರು ಶ್ರೀನಿವಾಸರಾಜು. ಇನ್ನು ಉಪೇಂದ್ರ ಅವರು ಆರ್ ಚಂದ್ರು ಅವರ 'ಬ್ರಹ್ಮ' ಚಿತ್ರದಲ್ಲೂ ಬಿಜಿಯಾಗಿದ್ದಾರೆ. ಅವರದೇ ಸ್ವಂತ ನಿರ್ಮಾಣದಲ್ಲಿ ಬರಬೇಕಾಗಿದ್ದ 'ಉಪ್ಪಿ 2' (ಉಪ್ಪಿಟ್ಟು) ಚಿತ್ರದಿಂದ ಸದ್ಯಕ್ಕೆ ಅವರು ವಿರಮಿಸಿಕೊಂಡಿದ್ದಾರೆ. ಬಸವಣ್ಣ ಹಾಗೂ ಬ್ರಹ್ಮ ಚಿತ್ರಗಳ ಬಳಿಕ ಅವರ ಹೋಂ ಬ್ಯಾನರ್ ಚಿತ್ರ ಸೆಟ್ಟೇರಲಿದೆ.

No comments:

Post a Comment