Pages

Tuesday, May 14, 2013

Bisi Bisi Kodubale -srini

ಕೋಡುಬಳೆ , ಅರೇ  ಏನಿದು ಕೋಡುಬಳೆ ಅಂಥಾ ಇದ್ದೀರಾ  ಬ್ಲಾಕ್ ಬಸ್ಟರ್ ಮೂವಿ  ಟೋಪಿವಾಲ  ಖ್ಯಾತಿಯ ಶ್ರೀನಿ ಯವರು ಯಂಗ್  ಕ್ರಿಯೇಟಿವ್ ಡೈರೆಕ್ಟರ್ ಆಗಿ ಹೊರಹೊಮ್ಮಿ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಅದೇ "ಕೋಡುಬಳೆ". +ಇದೇನಿದು ತಿಂಡಿ ಹೆಸರು ಇಟ್ಟಿದಿರಲ್ಲ ಎಂದು ಶ್ರೀನಿಯವರಿಗೆ ಕೇಳಿದಾಗ  ನಮಗೆ ಸಿಕ್ಕಿದ್ದು ಬರೀ  ಕಾದುನೋಡಿ ಎನ್ನುವ ಪದ ಮಾತ್ರ. ಪ್ರತಿ end ನಲ್ಲೂ ಒಂದು start ಇದೆಯೆಂಬ  ವೇದಾಂತದ ಅರ್ಥಪೂರ್ಣ  ಅಡಿಬರಹ ಇಟ್ಟುಕೊಂಡು ಸಿನೆಮಾ ಮಾಡಲು ಹೊರಟಿದ್ದಾರೆ ಶ್ರೀನಿ.

ಇನ್ನು ರುಚಿಕರವಾದ ಸಿನೆಮಾ ಮಾಡಲು ಶ್ರೀನಿಯವರು ಹೊಸಬರ ಶೋಧನೆಯಲ್ಲಿದ್ದಾರೆ ಯಂಗ್ ಟಾಲೆಂಟೆಡ್ ಹುಡುಗರೆಲ್ಲ ಸೇರಿ ಮಾಡುತ್ತಿರುವ ಈ ಸಿನೆಮಾ ಹೆಂಗ್ ಇರುತ್ತೆ ಎಂದು ಕಾದು  ನೋಡಬೇಕು. ಕೆಲವು ಬಲ್ಲ ಮೂಲಗಳ ಪ್ರಕಾರ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರು ರಾಘವೇಂದ್ರ ಥಾಣೆ.  ಇವರಿಗೆ  ಖ್ಯಾತ ಸಂಗೀತ ನಿರ್ದೇಶಕರಾದ ವಿ ಮನೋಹರ್ ರೊಡನೆ  ಕೆಲಸ ಮಾಡಿದ ಅನುಭವವಿದೆ. ಸಂಕಲನಕಾರರಾಗಿ ಹೊಸ ಪ್ರತಿಬೆ  ವಿಕ್ರಮ್ ಶ್ರೀಧರ್ ಜೊತೆಗಿದ್ದರೆ. ಕೋಡುಬಳೆ ಚಿತ್ರಕ್ಕೆ  ಕ್ರಿಯೇಟಿವ್ ಇಂಡಿಪೆಂಡೆಂಟ್ ಫಿಲಂ ಮೇಕರ್ ಅನೂಪ್ ಅಂಟೋನಿ ಯವರು ಶ್ರೀನಿ ರವರ ಹೊಸ ಟೀಂ ಗೆ ಸೇರ್ಪಡೆಯಾಗಿದ್ದಾರೆ .

ಇನ್ನು ವುಳಿದ ತಾರ ಬಳಗ ಹುಡುಕಬೇಕಾಗಿದೆ. ಹೊಸ ಕಥೆ ಹೊಸ ತಂಡ ಎಲ್ಲರನ್ನು ಒಟ್ಟುಗೂಡಿಸಿ ಶ್ರೀನಿಯವರು ಬಿಸಿ ಬಿಸಿ ಖಾರ ಖಾರ ಕೋಡುಬಳೆ ರೆಡಿ ಮಾಡಲಿದ್ದಾರೆ. ಹೊಸಬರ ಹೊಸ ಪ್ರಯತ್ನಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಬೆಂಬಲ ಸದಾ ಇದ್ದೆ ಇರುತ್ತದೆ ಆಲ್ ದಿ ಬೆಸ್ಟ್ ಶ್ರೀನಿ ಅಂಡ್ ಟೀಂ.

No comments:

Post a Comment