Pages

Friday, March 29, 2013

ಚಾರ್ ಮಿನಾರ್ ಚಂದ್ರು ಆಕ್ಷನ್ ಕಟ್ ನಲ್ಲಿ ಉಪೇಂದ್ರ

ಇದೇ ಮೊದಲ ಬಾರಿಗೆ ತಾಜ್ ಮಹಲ್, ಚಾರ್ ಮಿನಾರ್,ಮೈಲಾರಿ ಖ್ಯಾತಿಯ ನಿರ್ದೇಶಕ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದಾರೆ. ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಉಪ್ಪಿ ಹೀರೋ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಮುಂದಿನ ತಿಂಗಳೇ ಮುಹೂರ್ತ. ಟೋಪಿವಾಲ ಚಿತ್ರದ ಬಳಿಕ ಉಪ್ಪಿ ಅವರು ಹೋಂ ಬ್ಯಾನರ್ ಚಿತ್ರವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಅಷ್ಟರಲ್ಲಿ ಆರ್ ಚಂದ್ರು ಒಂದೊಳ್ಳೆ ಸಬ್ಜೆಕ್ಟ್ ಹಿಡಿದುಕೊಂಡು ಬಂದಿದ್ದಾರೆ. ಅದು ಉಪ್ಪಿಗೆ ಸಖತ್ ಇಷ್ಟವಾಯಿತಂತೆ. ಹೋಂ ಬ್ಯಾನರ್ ಚಿತ್ರವನ್ನು ಮುಂದಕ್ಕಾಗಿ ಚಂದ್ರು ಚಿತ್ರಕ್ಕೆ ಓಕೆ ಮಾಡಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ 'ಬ್ರಹ್ಮ, ದಿ ಲೀಡರ್' ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆಯಂತೆ. ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎನ್ನುತ್ತಾರೆ ಚಂದ್ರು. ಈ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ದ್ವಿಭಾಷಾ ಚಿತ್ರ ಎಂದರೆ ಅಷ್ಟು ಖರ್ಚಾಗಿಯೇ ಆಗುತ್ತದೆ ಬಿಡಿ. ತೆಲುಗು ಚಿತ್ರಕ್ಕೂ ಚಂದ್ರು ಅವರೇ ಸಾರಥ್ಯ ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರ ಚಾರ್ ಮಿನಾರ್ ಚಿತ್ರವೂ ತೆಲುಗಿನಲ್ಲಿ ಮೂಡಿಬರುತ್ತಿದೆ. 'ಬ್ರಹ್ಮ' ಚಿತ್ರದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ಆಗಬೇಕು. ಆದರೆ ಕಥೆ ಬಗ್ಗೆ ಮಾತ್ರ ಅತ್ತ ಉಪ್ಪಿ ಇತ್ತ ಚಂದ್ರು ಇಬ್ಬರೂ ಬಾಯ್ಬಿಡುತ್ತಿಲ್ಲ. ಇದೊಂದು ಆಕ್ಷನ್ ಚಿತ್ರ ಎಂದಷ್ಟೇ ಹೇಳಿ ಅವರು ಸಸ್ಪೆನ್ಸ್ ನಲ್ಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ.

No comments:

Post a Comment