Pages

Friday, March 22, 2013

ಬೆಸ್ಕಾಂಗೆ ರಿಯಲ್ ಸ್ಟಾರ್ ಉಪೇಂದ್ರ ರಾಯಭಾರಿ

ಈಗಾಗಲೆ ಹಲವಾರು ಉತ್ಪನ್ನಗಳಿಗೆ ರಾಯಭಾರಿ ಆಗಿ ಕಾರ್ಯನಿರ್ವಹಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ಮತ್ತೊಂದು ಸಂಸ್ಥೆಗೆ ರಾಯಭಾರಿಯಾಗಲು ಹೊರಟಿದ್ದಾರೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಬೆಸ್ಕಾಂ) ರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ. ಎಲ್ಲವೂ ಮಾತುಕತೆ ಹಂತದಲ್ಲಿದ್ದು ಉಪ್ಪಿ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ. ಇನ್ನೇನಿದ್ದರೂ ಒಪ್ಪಂದ ಪತ್ರಗಳಿಗೆ ಸಹಿ ಹಾಕುವುದೊಂದು ಬಾಕಿ ಇದೆ. ಈಗಾಗಲೆ ನಗರಪ್ರದೇಶಗಳಲ್ಲೂ ತೀವ್ರ ವಿದ್ಯುತ್ ಕೊರತೆ ಎದುರಾಗಿದೆ, ಹಳ್ಳಿಗಳ ಪರಿಸ್ಥಿತಿ ಕೇಳುವಂತೆಯೇ ಇಲ್ಲ ಬಿಡಿ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉಳಿತಾಯದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಇದಕ್ಕಾಗಿ ಉಪೇಂದ್ರ ಅವರ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಬೆಸ್ಕಾಂ ಆಫರ್ ಗೆ ಉಪೇಂದ್ರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೇನಿದ್ದರೂ ಅವರು ಸಹಿ ಹಾಕುವುದೊಂದು ಬಾಕಿ ಇದೆ. ಈ ಒಪ್ಪಂದಕ್ಕಾಗಿ ಉಪೇಂದ್ರ ಅವರಿಗೆ ಬೆಸ್ಕಾಂ ರು.36 ಲಕ್ಷ ನೀಡುತ್ತಿದೆ. ಇದರ ಜೊತೆಗೆ ಕೆಲವು ಷರತ್ತುಗಳನ್ನು ಬೆಸ್ಕಾಂ ಹಾಕಿದೆ. ಅವಕ್ಕೂ ಉಪೇಂದ್ರ ಓಕೆ ಎಂದಿದ್ದಾರೆ. ಅದರ ಪ್ರಕಾರ, ಉಪ್ಪಿ ಕುಟುಂಬ ಸಮೇತ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕು. ಒಪ್ಪಂದ ಮಾಡಿಕೊಂಡ 1 ವರ್ಷದ ತನಕ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ. ಉಪೇಂದ್ರ ಈಗಾಗಲೆ ಯುನೈಟೆಡ್ ಬ್ರೀವರೀಸ್, ಲೂನಾರ್ಸ್, ಇಮಾಮಿ ನವರತ್ನನ ಬ್ರ್ಯಾಂಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಬೆಸ್ಕಾಂ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ ಎಂದ ಉಪ್ಪಿ ಈ ಬಾರಿ ಏನಂತಾರೋ?

Real Star Upendra has bagged yet another endorsement. The actor, who is the brand ambassador of quite a few private products, will be the brand ambassador of BESCOM (Bangalore Electricity Supply Company Limited). Sources say that the talks are in final stages and Upendra has agreed to endorse BESCOM. He is just one step away from being the brand ambassador of the electricity company. It is said that Uppi will be getting Rs 36 lakhs in the deal. It is an initiative taken by the company to educate people on power consumption and the brand Upendra factor will play a key role in reaching out the masses on understanding the precious value of electricity, says a source. However, Upendra, who is busy with his next directorial film tentatively titled Upendra 2, is also the brand ambassador of United Breweries, Lunars and Imami.

No comments:

Post a Comment