Pages

Tuesday, March 19, 2013

ಉಪೇಂದ್ರ 'ಟೋಪಿವಾಲ' ಭರ್ಜರಿ ಕಲೆಕ್ಷನ್

 ರಿಯಲ್ ಸ್ಟಾರ್ ಉಪೇಂದ್ರ ಚಿತ್ರಗಳಿಗೆ ಬಾಕ್ಸ್ ಆಫೀಸಲ್ಲಿ ಮಿನಿಮಮ್ ಗ್ಯಾರಂಟಿ ಇದ್ದೇ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ ಲೇಟೆಸ್ಟ್ ಟೋಪಿವಾಲ ಚಿತ್ರ ಕಟು ಚಿತ್ರವಿಮರ್ಶೆಗಳ ನಡುವೆಯೂ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿದೆ. . ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ರು.3.50 ಕೋಟಿ ಗಳಿಸಿದೆ. "ತಲೆ ಇಲ್ಲದವರಿಗಲ್ಲ ಪ್ರಜಾಪ್ರಭುತ್ವ" ಎಂಬ ಸಂದೇಶ ಸಾರುವ ಈ ಚಿತ್ರವನ್ನು ಉಪ್ಪಿ ಅಭಿಮಾನಿಗಳು ಕೈಹಿಡಿದಿದ್ದಾರೆ. ಚಿತ್ರವನ್ನು ಮತ್ತೆ ಮತ್ತೆ ನೋಡಿ ಅವರ ಅಭಿಮಾನಿಗಳು ಸಂತಸಪಡುತ್ತಿದ್ದಾರೆ.
ಶುಕ್ರವಾರ (ಮಾರ್ಚ್ 15) ತೆರೆಕಂಡ ಚಿತ್ರ ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಕೇಂದ್ರದಲ್ಲಿ ಸರಿಸುಮಾರು ಒಂದೂವರೆ ಕೋಟಿ ಗಳಿಸಿದೆ. ಇನ್ನು ಮೈಸೂರು, ಮಂಡ್ಯ, ಹಾಸನ,ಚಾಮರಾಜನಗರ, ಕೊಡಗಿನಲ್ಲೂ ಸದ್ದು ಮಾಡಿದೆ, ಈ ಕೇಂದ್ರಗಳಲ್ಲಿ ರು.50 ಲಕ್ಷ ಕಲೆಕ್ಷನ್ ಮಾಡಿದೆ. ಇನ್ನು ಹುಬ್ಬಳ್ಳಿಯಲ್ಲಿ ರು.40 ಲಕ್ಷ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ರು.30 ಲಕ್ಷ ಹಾಗೂ ಮಂಗಳೂರಿನಲ್ಲಿ ರು.30 ಲಕ್ಷ ಕಲೆಕ್ಷನ್ ಮಾಡಿದೆ ಎನ್ನುತ್ತವೆ ಮೂಲಗಳು. ವಾರಾಂತ್ಯಕ್ಕೆ ಸುಮಾರು ರು.5 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಉಪೇಂದ್ರ ಅಭಿಮಾನಿಗಳಲ್ಲಿ ಬಹಳಷ್ಟು ಮಂದಿ ಬಿಸಿರಕ್ತದ ಯುವಕರಿದ್ದಾರೆ. ಈ ಬಾರಿ ಇವರೇ ಟೋಪಿವಾಲ ಚಿತ್ರವನ್ನು ಕೈಹಿಡಿದಿರುವುದು. ಒಟ್ಟಿನಲ್ಲಿ ಉಪ್ಪಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

No comments:

Post a Comment