Pages

Saturday, March 9, 2013

ಸೆನ್ಸಾರ್ ನಲ್ಲಿ ಪಾಸಾದ ಉಪೇಂದ್ರ ಟೋಪಿವಾಲ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಸ್ತು ಎಂದಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು ಚಿತ್ರ ಇದೇ ಮಾರ್ಚ್ 15ಕ್ಕೆ ಬಿಡುಗಡೆಯಾಗುತ್ತಿದೆ. ಉಪ್ಪಿ ಅಭಿಮಾನಿಗಳಲ್ಲಿ ಸಂಭ್ರಮ ನೆಲೆಸಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಉಪೇಂದ್ರ ಚಿತ್ರ ಎಂದರೆ ಸಾಮಾನ್ಯವಾಗಿ ಸಂಭಾಷಣೆ, ಕಥೆ, ಹಾಡುಗಳ ಮೇಲೆ ಬಹಳಷ್ಟು ನಿರೀಕ್ಷೆಗಳಿರುತ್ತವೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಟೋಪಿವಾಲ ಚಿತ್ರವೂ ಒಂದು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರವಿರುತ್ತದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. ಮಾರ್ಚ್ 8ರಂದೇ ಚಿತ್ರ ತೆರೆಕಾಣಬೇಕಾಗಿತ್ತು. ಆದರೆ ಚಿತ್ರಕ್ಕೆ ಸೆನ್ಸಾರ್ ಆಗಲು ಕೊಂಚ ತಡವಾಯಿತು. ಪ್ರಸ್ತುತ ರಾಜಕೀಯ ಸನ್ನಿವೇಶಗಳು ಚಿತ್ರದಲ್ಲಿದ್ದು, ಚಿತ್ರದ ಕಥೆಗೆ ಭಂಗ ಬಾರದಂತೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ. ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೆನ್ಸಾರ್ ಚಿತ್ರತಂಡಕ್ಕೆ ಸೂಚಿಸಿದೆ. ಚಿತ್ರದ ಕಥೆಯ ಓಟಕ್ಕೆ ಯಾವುದೇ ತೊಂದರೆಯಾಗದಂತೆ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. 'ಟೋಪಿವಾಲ' ಕಥೆ, ಚಿತ್ರಕಥೆ ಉಪೇಂದ್ರ ಅವರೇ ಹೆಣೆದಿದ್ದರೂ ಆಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ್ (ಶ್ರೀನಿ). ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ ಚಿತ್ರ ಇದಾಗಿದೆ. ಭಾವನಾ ನಾಯಕಿಯಾಗಿರುವ ಚಿತ್ರದ ಅಡಿಬರಹವು ಕ್ಯಾಚಿಯಾಗಿದ್ದು, 'ತಲೆ ಇಲ್ಲದವರಿಗಲ್ಲ' ಎಂದಿಡಲಾಗಿದೆ.
One of the most anticipated films of recent times in Sandalwood, Upendra's Topiwala, was viewed by the Censor Board recently. The film has been cleared by the board and has been awarded a U/A certificate by it. Topiwala is all set to release on March 15.

The story and screenplay of the film has been written by the star himself and RJ Sreeni, the director has also penned the dialogues. Interestingly this will mark is Sreeni's screen debut in Sandalwood. The director had won international recognition with his short film, Simply Kail Awesome.

Fans of Upendra are all excited and geared up to see the film as every film of the star offers something new. The film also stars actress Bhavana in the lead and has V Harikrishna scoring the music. The film is expected to have one of the biggest releases for a Kannada film in recent years.

No comments:

Post a Comment