Pages

Tuesday, February 19, 2013

ಉಪೇಂದ್ರ 'ಟೋಪಿವಾಲ' ಮಾರ್ಚ್ ನಲ್ಲಿ ತೆರೆಗೆ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಟೋಪಿವಾಲ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೆ ಈ ಚಿತ್ರದ ಧ್ವನಿಸುರುಳಿ ಹಾಗೂ ಧ್ವನಿಮುದ್ರಿಕೆಗಳು ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಉಪ್ಪಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಟೋಪಿವಾಲ ಚಿತ್ರದ ನಾಯಕಿ ಜಾಕಿ ಖ್ಯಾತಿಯ ಭಾವನಾ. ಕಥೆ, ಚಿತ್ರಕಥೆ ಉಪೇಂದ್ರ ಅವರೇ ಹೆಣೆದಿದ್ದರೂ ಆಕ್ಷನ್ ಕಟ್ ಹೇಳಿರುವುದು ಶ್ರೀನಿವಾಸ್ (ಶ್ರೀನಿ). ಆರ್.ಎಸ್.ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪಿ.ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್ ನಿರ್ಮಿಸಿರುವ ಚಿತ್ರ ಇದಾಗಿದೆ.

'ತಲೆ ಇಲ್ಲದವರಿಗಲ್ಲ' ಎಂಬುದು ಚಿತ್ರದ ಅಡಿಬರಹ. ಈ ಚಿತ್ರದ ಐಟಂ ಹಾಡಿನಲ್ಲಿ ಮುಕ್ತಿ ಮೋಹನ್ ತಮ್ಮ ಸೊಂಟ ಬಳುಕಿಸಿದ್ದಾರೆ. ರೋಮ್ಯಾಂಟಿಕ್ ಚಿತ್ರವಾಗಿರುವ ಇದರಲ್ಲಿ ಸಾಕಷ್ಟು ಹಾಸ್ಯ, ಚಲ್ಲಾಟ, ಮಸಾಲೆ ಅಂಶಗಳು ಇವೆ. ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ರವಿಶಂಕರ್, ರಾಜು ತಾಳಿಕೋಟೆ, ಮೈತ್ರೇಯ, ಬಿರಾದಾರ್, ರಾಕ್ ಲೈನ್ ಸುಧಾಕರ್ ಮುಂತಾದ ಕಲಾವಿದರಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಶ್ರೀನಿವಾಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು. ಅವರ ಕಿರುಚಿತ್ರ 'Simply KailAwesome' ಗಂಭೀರ ಪ್ರಯತ್ನಕ್ಕೆ ಭಾರಿ ಮನ್ನಣೆ ಸಿಕ್ಕಿದೆ. ಶ್ರೀಷ ಅವರ ಛಾಯಾಗ್ರಹಣ, ಶ್ರೀ ಸಂಕಲನ, ರವಿವರ್ಮ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾನಿರ್ದೇಶನವಿದೆ

No comments:

Post a Comment