Pages

Friday, December 28, 2012

ಹೊಸ ವರ್ಷದಲ್ಲಿ ಹೊಸ ಟೋಪಿಯೊಂದಿಗೆ ಉಪೇಂದ್ರ !

ಉಪೇಂದ್ರ ಮತ್ತು ಭಾವನ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಟೋಪಿವಾಲಾ” ಚಿತ್ರವನ್ನು ಜನವರಿ 25ಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರದ ಮೊದಲ ಪ್ರೆಸ್ ಮೀಟ್‌ನಲ್ಲಿ ತಿಳಿಸಲಾಯಿತು. ಯುವ ನಿರ್ದೇಶಕ ಆರ್. ಜೆ. ಶ್ರೀನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತು ಕೆ. ಪಿ. ಶ್ರೀಕಾಂತ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಉಪೇಂದ್ರ ಚಿತ್ರದ ತಯಾರಿಕೆಯ ಬಗ್ಗೆ ಮಾತನಾಡುತ್ತಾ, ಈ ಮೊದಲು ಶ್ರೀನಿಯವರ “Kailawsome” ಚಿತ್ರ ಉಪೇಂದ್ರರ ಮನವೊಲಿಸಿತ್ತು. ನಂತರ ಶ್ರೀನಿಯ ಜೊತೆ ಒಂದು ಚಿತ್ರವನ್ನು ಮಾಡಲು ಭರವಸೆ ನೀಡಿದ್ದರು. ನಂತರ ನನ್ನ ಬಳಿ ದಿನವೂ ಬರಲು ಶುರುಮಾಡಿದರು. ಆಗ ನನ್ನ ಬಳಿ ಒಂದು ಚಿತ್ರದ ಎಳೆಯಿತು. ಅದನ್ನು ಶ್ರೀನಿಗೆ ತಿಳಿಸಿದೆ. ಅವನು ಒಪ್ಪಿ ಚಿತ್ರವನ್ನು ಮಾಡಲು ನಿರ್ದರಿಸಿದ. ಆ ಕಥೆಯ ಎಳೆಯನ್ನು ಇಟ್ಟುಕೊಂಡು, ಸ್ಕ್ರಿಪ್ಟ್‌ನ್ನು ತಯಾರಿಸಿದೆ. ಅದಕ್ಕೆ ಶ್ರೀನಿ ಕೂಡ ಹಲವು ಸಲಹೆಯನ್ನು ಕೊಟ್ಟಿದ್ದಾನೆ. ಚಿತ್ರಕಥೆ ತಯಾರಾದ ನಂತರ ನಿರ್ಮಾಪಕರ ಶೋಧದಲ್ಲಿದ್ದಾಗ, ಕನಕಪುರ ಶ್ರೀನಿವಾಸ್ ಮತ್ತು ಕೆ. ಪಿ ಶ್ರೀಕಾಂತ್‌ರನ್ನು ಆಯ್ಕೆ ಮಾಡಿದೆವು ಏಕೆಂದರೆ, ಅವರುಗಳು ಗುಣಮಟ್ಟ ಚಿತ್ರಗಳನ್ನು ತಯಾರಿಸುವರಲ್ಲದೆ, ಚಿತ್ರದ ಖರ್ಚಿಗೆ ವ್ಯಯಿಸಲು ಹಿಂಜರಿಯುವುದಿಲ್ಲ. ಹೀಗೆ ಚಿತ್ರದ ತಯಾರಿಕೆ ಶುರುವಾಯಿತು ಎಂದರು ಉಪೇಂದ್ರ.

ಯುವ ಉತ್ಸಾಹಿ ತಂಡವೊಂದು ಹೊಸ ಕಲ್ಪನೆಯೊಂದನ್ನು ಚಿತ್ರದಲ್ಲಿ ಕೊಟ್ಟಿರುವ ಖಾತರಿಯಿದೆ ಎಂದರು ಕನಕಪುರ ಶ್ರೀನಿವಾಸ್. ಈ ಹಿಂದೆ ಉಪೇಂದ್ರರ ಜೊತೆ “ಓಂಕಾರ” ಚಿತ್ರವನ್ನು ಮಾಡಿದ್ದನ್ನು ನೆನಪಿಸಿಕೊಂಡರು.

ಕಥೆ ಮತ್ತು ಚಿತ್ರಕಥೆಯನ್ನು ಉಪೇಂದ್ರ ಬರೆದಿರುವುದು ಚಿತ್ರದ ಪ್ಲಸ್ ಪಾಯಿಂಟ್ ಎಂದರು ಶ್ರೀನಿ. ನಾನು ಚಿತ್ರವನ್ನು ನಿರ್ದೇಶಿಸಿದ್ದು, ಸಂಭಾಷಣೆಯನ್ನು ಬರೆದಿದ್ದೇನೆ ಎಂದರು. ಉಪೇಂದ್ರರ ಪ್ರಬಲ ಚಿತ್ರಕಥೆಯಿಂದ ನನ್ನ ಕೆಲಸ ಸುಗಮವಾಯಿತು, ಎಂದು ಉಪೇಂದ್ರರಿಗೆ ಧನ್ಯವಾದಗಳನ್ನು ತಿಳಿಸಿದರು ಶ್ರೀನಿ.

ಚಿತ್ರದ ಕಥೆಯು ನಮ್ಮ ಜೀವನದಲ್ಲಿ ನಡೆಯುವ ಸಮಕಾಲೀನ ಘಟನೆಗಳನ್ನು ಆಧರಿಸಿದೆ. ಈ ಘಟನೆಗಳ ಭಾಗವಾಗಿ ರಾಜಕೀಯವನ್ನು ತೋರಿಸಿದ್ದೇವೆ. ಒಂದು ರೀತಿಯಲ್ಲಿ ಈ ಚಿತ್ರವು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೆ ಹತ್ತಿರವಾಗಿರುತ್ತದೆ. ಚುಚ್ಚುಮಾತುಗಳು, ಹಾಸ್ಯ ಮತ್ತು ಕೆಲವು ರೋಚಕ ಕ್ಷಣಗಳನ್ನು ಚಿತ್ರವು ಹೊಂದಿದೆ ಎಂದರು ಉಪೇಂದ್ರ.

ಹರಿ ಕೃಷ್ಣರ ಸಂಗೀತಕ್ಕೆ ಒಂದು ಹಾಡು ಮತ್ತು ಕೆಲವು ಸನ್ನಿವೇಶಗಳನ್ನು ಸ್ವಿಜರ್ಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಉಪೇಂದ್ರರನ್ನೊಳಗೊಂಡ ಒಂದು ಹಾಡಿನ ಶೂಟಿಂಗ್ ಬಾಕಿಯಿದ್ದು, ಮತ್ತೆಲ್ಲದುದರ ಶೂಟಿಂಗ್ ಮುಗಿದಿದೆ ಎಂದರು ಶ್ರೀನಿ.







No comments:

Post a Comment