Pages

Sunday, December 2, 2012

ತಿರುಪತಿಯಲ್ಲಿ ಹರಕೆ ತೀರಿಸಿಕೊಂಡ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರು ತಿರುಮಲ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನಭಾಗ್ಯ ಪಡೆದರು. ಪ್ರಿಯಾಂಕಾ ಉಪೇಂದ್ರ ಹಾಗೂ ಮಕ್ಕಳಾದ ಆಯುಶ್ ಹಾಗೂ ಐಶ್ವರ್ಯಾ ಅವರೂ ಜೊತೆಗಿದ್ದರು.
ತಿರುಪತಿಯಲ್ಲಿ ತೆಲುಗು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಉಪೇಂದ್ರ ಅವರು ತೆಲುಗಿನಲ್ಲೇ ಮಾತನಾಡಿದರು. ತಮ್ಮ ಪತ್ನಿಯ ಹರಕೆಯನ್ನು ತೀರಿಸುವ ಸಲುವಾಗಿ ತಾವು ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾಗಿ ತಿಳಿಸಿದರು.
ಅವರ ಅಭಿನಯದ ಟೋಪಿವಾಲಾ ಚಿತ್ರವೂ ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರವನ್ನೂ ತೆಲುಗು ಭಾಷೆಗೆ ಡಬ್ ಮಾಡಲಾಗುತ್ತದೆಯೇ ಎಂದು ಕೇಳಲಾಗಿ. ಅವರು ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದರು.
ಆರಕ್ಷಕ, ಕಲ್ಪನ, ಕಠಾರಿವೀರ ಸುರಸುಂದರಾಂಗಿ ಹಾಗೂ ಗಾಡ್ ಫಾದರ್ ಚಿತ್ರಗಳ ಬಳಿಕ ಟೋಪಿವಾಲಾ ಚಿತ್ರ ಬರುತ್ತಿದೆ. ಆದರೆ ಈ ಹಿಂದಿನ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಟೋಪಿವಾಲಾ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ.
ಉಪ್ಪಿ ಹೋಂ ಬ್ಯಾನರ್ ನಲ್ಲಿ 'ಉಪೇಂದ್ರ 2' ಚಿತ್ರದ ಸಿದ್ಧತೆಗಳೂ ನಡೆಯುತ್ತಿವೆ. ಈ ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳುವುದರೆ ಜೊತೆಗೆ ಅಭಿನಯಿಸಲಿದ್ದಾರೆ. ಟೋಪಿವಾಲಾ ಚಿತ್ರದ ನಾಯಕಿ ಭಾವನಾ ಮೆನನ್. ಸಂಗೀತ ಹರಿಕೃಷ್ಣ. ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ನಿರ್ದೇಶನ ಶ್ರೀನಿವಾಸ್.

3 comments:

  1. Sushanth ravare,nivu uppia annana bagegina ella salahegalannu vivarisuhudokkoskara,na nimage chiraruni.
    Danyavadagalu.

    ReplyDelete
    Replies
    1. ayyo devre..naanu kuda nim thara obba fan aste..thanks nam log visit madidakke and gotiro mahithiyannu yellaru thilkoli antha prayathna madidini aste..

      Delete