Pages

Monday, August 6, 2012

ಉಪೇಂದ್ರ ರಿಮೇಕ್ ಪಾರ್ಟಿ ಅಲ್ವಂತೆ, ನಂಬ್ತೀರಾ?

ಕನ್ನಡ ಚಿತ್ರರಂಗದ ಹಲವು ಪ್ರಥಮಗಳಿಗೆ, ವಿಶಿಷ್ಟತೆಗಳಿಗೆ, ವಿಚಿತ್ರಗಳಿಗೆ ಕಾರಣ ನಿರ್ದೇಶಕ ಉಪೇಂದ್ರ. ಇದರಲ್ಲಿ ಎರಡನೇ ಮಾತೇ ಇಲ್ಲ. ಹಾಗೆಂದು ಅವರು ಮಾಡಿಕೊಂಡು ಬಂದಿರುವ ರಿಮೇಕ್ ಪಾಲಿಸಿಗಳನ್ನೂ ಒಪ್ಪಿಕೊಳ್ಳಬಹುದೇ? ಕೊಂಚ ಹಿಂದೆ ಮುಂದೆ ನೋಡಬೇಕಾಗುತ್ತದೆ, ಅಲ್ಲವೇ? ಆದರೆ ಉಪ್ಪಿ ಮಾತ್ರ ಹಿಂದೆ ಮುಂದೆ ನೋಡಿಲ್ಲ, ನಾನು ರಿಮೇಕ್ ಪಾರ್ಟಿ ಅಲ್ವೇ ಅಲ್ಲ ಎಂದು ಸಾರಿ ಬಿಟ್ಟಿದ್ದಾರೆ.

ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಉಪ್ಪಿ ನಾಯಕನಾಗಿರುವ 'ಗಾಡ್‌ಫಾದರ್' ಬಿಡುಗಡೆ ಸಂದರ್ಭದಲ್ಲೇ (ಜುಲೈ 27) ಇಂತಹದ್ದೊಂದು ಮಾತು ಹೊರ ಬಿದ್ದಿದೆ.

"ನಿಮ್ಮ ಮುಂದಿನ ಚಿತ್ರವೂ ತಮಿಳಿನ ರಿಮೇಕ್ ಅಲ್ಲವೇ?" ಎಂದಷ್ಟೇ 'ಬೆಂಗಳೂರು ಮಿರರ್' ಪ್ರಶ್ನಿಸಿತ್ತು. ಇದಕ್ಕೆ ಉಪೇಂದ್ರ ಕೊಟ್ಟ ಉತ್ತರ ಏನು ಗೊತ್ತಾ? ಇಲ್ಲಿದೆ ಓದಿಕೊಳ್ಳಿ:

"ಬೆನ್ನು ಬೆನ್ನಿಗೆ ರಿಮೇಕ್ ಚಿತ್ರಗಳಲ್ಲೇ ನಟಿಸುತ್ತಿರುವಂತೆ ಕಾಣುತ್ತಿದೆ. ಆದರೆ ಅದೇ ನಿಜವಲ್ಲ. ತಮಿಳಿನ 'ಕಾಂಚನ' ಕಥೆ ತುಂಬಾ ಭಿನ್ನವಾಗಿದ್ದುದರಿಂದ ಅದರ ರಿಮೇಕ್ 'ಕಲ್ಪನಾ'ದಲ್ಲಿ ನಟಿಸಲು ಒಪ್ಪಿಕೊಂಡೆ. ಹಾಗೆಂದು ನಾನು ರಿಮೇಕ್ ಕಡೆಯಿದ್ದೇನೆ ಎಂದರ್ಥವಲ್ಲ. ವಿಭಿನ್ನ ಕಥೆಗಳಿಂದಷ್ಟೇ ನಾನು ರಿಮೇಕ್ ಆಫರುಗಳನ್ನು ಒಪ್ಪಿಕೊಂಡಿದ್ದೇನೆ"

ಇದು ನಿಜವೇ ಉಪ್ಪಿ?
ಉಪೇಂದ್ರ ನಿಜಕ್ಕೂ ರಿಮೇಕ್ ಪಾರ್ಟಿ ಅಲ್ಲವೇ? ನೀವೇ ನಿರ್ಧರಿಸಿ, ಅದಕ್ಕೂ ಮೊದಲು ಇಲ್ಲೇ ಕೆಳಗೆ ಕೊಟ್ಟಿರುವ ಪಟ್ಟಿಯ ಮೇಲೊಮ್ಮೆ ಕಣ್ಣಾಡಿಸಿ. 'ಪ್ರೀತ್ಸೆ'ಯಿಂದ ಆರಂಭವಾದ ಅವರ ರಿಮೇಕ್ ಯಾನ 'ಕಲ್ಪನಾ'ವರೆಗೆ ಹೇಗೆಲ್ಲ ಸಾಗಿ ಬಂದಿದೆ ಅನ್ನೋದನ್ನು ನೋಡಿ. ಆಗ ನಿಜ ಸಂಗತಿ ಯಾವುದೆಂದು ಗೊತ್ತಾಗುತ್ತದೆ. ಆ ರಿಮೇಕ್ ಚಿತ್ರಗಳಲ್ಲಿನ ಯಾವ ವಿಭಿನ್ನ ಕಥೆಗಾಗಿ ಉಪೇಂದ್ರ ಅವುಗಳನ್ನು ಒಪ್ಪಿಕೊಂಡರು ಅನ್ನೋದನ್ನೂ ಪ್ರೇಕ್ಷಕರು ನಿರ್ಧರಿಸಬಹುದು.

ಒಟ್ಟು ಚಿತ್ರಗಳು: 32
ರಿಮೇಕ್ ಚಿತ್ರಗಳು: 18
ಸ್ವಮೇಕ್ ಚಿತ್ರಗಳು: 14

ಇವು ರಿಮೇಕ್ ಚಿತ್ರಗಳು....
1) ಪ್ರೀತ್ಸೆ - ಢರ್
2) ನಾನು ನಾನೇ - ರಾಜಾ ಹಿಂದೂಸ್ತಾನಿ
3) ನಾಗರಹಾವು - ಬಾಜಿಗರ್
4) ರಕ್ತಕಣ್ಣೀರು - ರಕ್ತಕಣ್ಣೀರ್
5) ಕುಟುಂಬ - ಗ್ಯಾಂಗ್‌ಲೀಡರ್
6) ಗೋಕರ್ಣ - ಅಣ್ಣಾ ಮಲೈ
7) ಗೌರಮ್ಮ - ನುವ್ವು ನಾಕು ನೆಚ್ಚಾವು
8) ಉಪ್ಪಿದಾದ ಎಂಬಿಬಿಎಸ್ - ಮುನ್ನಾಭಾಯಿ ಎಂಬಿಬಿಎಸ್
9) ತಂದೆಗೆ ತಕ್ಕ ಮಗ - ದೇವರ್ ಮಗನ್
10) ಐಶ್ವರ್ಯಾ - ಮನ್ಮಥುಡು
11) ಪರೋಡಿ - ಕ್ರಾಂತಿವೀರ್
12) ಅನಾಥರು - ಪಿತಾಮಗನ್
13) ಬುದ್ಧಿವಂತ - ನಾನ್ ಅವನ್ ಇಲ್ಲೈ
14) ದುಬೈ ಬಾಬು - ದುಬೈ ಸೀನು
15) ರಜನಿ - ಕೃಷ್ಣ
16) ಶ್ರೀಮತಿ - ಐತ್ರಾಝ್
17) ಗಾಡ್‌ಫಾದರ್ - ವರಲಾರು 
18) ಕಲ್ಪನಾ - ಕಾಂಚನ (ಬಿಡುಗಡೆಯಾಗಿಲ್ಲ)

ಇವು ಸ್ವಮೇಕ್ ಚಿತ್ರಗಳು....
1) ಎ
2) ಉಪೇಂದ್ರ
3) ಎಚ್‌ಟುಓ
4) ಸೂಪರ್ ಸ್ಟಾರ್
5) ಹಾಲಿವುಡ್
6) ಓಂಕಾರ
7) ನ್ಯೂಸ್
8) ಆಟೋಶಂಕರ್
9) ಮಸ್ತಿ
10) ಲವಕುಶ
11) ಸೂಪರ್
12) ಆರಕ್ಷಕ
13) ಕಠಾರಿ ವೀರ ಸುರಸುಂದರಾಂಗಿ
14) ಟೋಪಿವಾಲಾ (ಚಿತ್ರೀಕರಣದಲ್ಲಿದೆ)

3 comments:

  1. alla nivu uppi fan aagi uppi baggene itara ella post madtiralla nachke maana maryade enadru idiya nimge????????

    ReplyDelete
    Replies
    1. ha ha thanks for ur sweet complement.. for ur kind information.. nan first ge ond link kottini dayavittu adan odi..edann naan heliddu alla... uppi sir bagge bari olledu bardreadu real fan aagolla... swalpa kahi nu irbeku... first link nodi amele heli... nange gottu yaaru real and yaaru reel fans antha

      Delete
  2. fuk yo asshole...if yo say any word about uppi, ill burst your ass

    ReplyDelete