Pages

Tuesday, May 8, 2012

ಕಠಾರಿವೀರ ವಿರುದ್ದ ಆಖಾಡಕ್ಕೆ ಇಳಿದ ಪೇಜಾವರ ಶ್ರೀ

Udupi Pejawar Seer On Katari Veera Movie

ಕಠಾರಿವೀರ ಸುರಸುಂದರಾಂಗಿ ಚಿತ್ರಕ್ಕೆ ಒಂದಲ್ಲೊಂದು ವಿಘ್ನ, ವಿವಾದಗಳು. ಚಿತ್ರ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಮತ್ತೊಂದು ವಿವಾದ ಎದುರಾಗಿದೆ. ಚಿತ್ರದ ಬಗ್ಗೆ ಉಡುಪಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಗರಂ ಆಗಿದ್ದಾರೆ.

ಚಿತ್ರದಲ್ಲಿ ಹಿಂದೂ ದೇವ, ದೇವತೆ ಮತ್ತು ಹಿಂದೂಗಳ ಭಾವನೆಗಳನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಶ್ರೀಗಳು ಚಿತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚಿತ್ರ ಬಿಡುಗಡೆಯ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿಂದೂ ಭಾವನೆಗಳಿಗೆ ಧಕ್ಕೆಯಾದರೆ ನಾವು ತೀವ್ರವಾಗಿ ಪ್ರತಿಭಟಿಸುತ್ತೇವೆ. ಗುರುವಾರ ( ಮೇ 10) ದಂದು ನಾವು ಈ ಸಂಬಂಧ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

ಶ್ರೀಗಳ ಹೇಳಿಕೆಗೆ ಕೂಡಲೇ ಸ್ಪಂದಿಸಿದ ನಿರ್ಮಾಪಕ ಮುನಿರತ್ನ, ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸುವ ಯಾವುದೇ ದೃಶ್ಯಗಳಿಲ್ಲ. ಚಿತ್ರ ನೋಡಿದ ಮೇಲೆ ನಿಮಗೆ ಅದು ತಿಳಿಯುತ್ತೇವೆ. ತಮಗೆ ಅನುಮತಿ ಇದ್ದರೆ ಚಿತ್ರ ವೀಕ್ಷಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಮುನಿರತ್ನ ಶ್ರೀಗಳನ್ನು ಕೋರಿದ್ದಾರೆ.

ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರದಲ್ಲಿ ಈ ರೀತಿಯ ದೃಶ್ಯಗಳಿವೆ ಎನ್ನುವುದು ಪೇಜಾವರ ಶ್ರೀಗಳ ಗಮನಕ್ಕೆ ಹೇಗೆ ಬಂತು ಎನ್ನುವ ವಿಷಯ ತಿಳಿದು ಬಂದಿಲ್ಲ.

No comments:

Post a Comment