Pages

Tuesday, May 8, 2012

ಮಂಜುಗೆ ಕನ್ನಡವೇ ಸರಿಯಾಗಿ ಬರಲ್ಲ; ಮುನಿರತ್ನ

ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು ಹಾಗೂ ಕಠಾರಿವೀರ ಸುರಸುಂದರಾಂಗಿ ಚಿತ್ರದ ನಿರ್ಮಾಪಕ ಮುನಿರತ್ನ ನಡುವೆ ಸಿನಿಮಾ ಬಿಡುಗಡೆ ಬಗ್ಗೆ ನಡೆಯುತ್ತಿದ್ದ ಜಟಾಪಟಿ, ಮನಸ್ತಾಪ ಕೊನೆಗೊಂಡಿದೆ. ಈ ಇಬ್ಬರೂ ಮೊದಲಿನಂತೆ ಈಗ ಆತ್ಮೀಯ ಮಿತ್ರರು. ಆದರೆ ಈ ಮೊದಲು ಕಿತ್ತಾಡುತ್ತಿದ್ದ ಸಮಯದಲ್ಲಿ ಆಡಿದ್ದ ಮಾತುಗಳು ಹಾಗೂ ನಡೆದುಕೊಂಡಿದ್ದ ರೀತಿಯ ಬಗ್ಗೆ ಈಗ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ.

ಆ ಬಗ್ಗೆ ಸಾಕಷ್ಟು ಕಾಮಿಡಿಯಾಗಿ ಮಾತನಾಡುತ್ತಿರುವವ ಪೈಕಿ ಮುಂಚೂಣಿಯಲ್ಲಿರುವವರು ಮುನಿರತ್ನ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ "ನನ್ನ ಸ್ನೇಹಿತ ಮಂಜುಗೆ ಇಂಗ್ಲಿಷ್ ಹೋಗ್ಲಿ.., ಕನ್ನಡವೂ ಸರಿಯಾಗಿ ಬರಲ್ಲ. ವಾಹಿನಿಯೊಂದರ ಸಂದರ್ಶನದಲ್ಲಿ ಆವೇಶದಿಂದ ಮಾತನಾಡುತ್ತಿದ್ದ ಮಂಜು, 'ನಾನ್ಯಾವತ್ತೂ ಹಿಂದಿಟ್ಟ ಹೆಜ್ಜೆ ಮುಂದಿಡಲ್ಲ' ಎಂದು ತಪ್ಪಾಗಿ ಹೇಳಿದ್ದಲ್ಲದೇ ಅದನ್ನೇ ಮತ್ತೆ ಮತ್ತೆ ವೀರಾವೇಶದಿಂದ ಹೇಳುತ್ತಿದ್ದರು.

ಪಾಪ, ಅವರಿಗೆ 'ಮುಂದಿಟ್ಟ ಹೆಜ್ಜೆ ಯಾವತ್ತೂ ಹಿಂದಿಡಲ್ಲ' ಎಂದು ಹೇಳೋ ಬಯಕೆ ಇತ್ತಾದರೂ ಅದಕ್ಕೆ ತದ್ವಿರುದ್ಧವಾಗಿ ಮಾತನಾಡಿ ನಗೆಪಾಟಲಿಗೆ ಗುರಿಯಾದರು" ಎಂದಿದ್ದಾರೆ. ಈಗ ಪದೇ ಪದೇ ಮಂಜು ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಿರುವ ಮುನಿರತ್ನ ಅದ್ಯಾಕೆ ಮಂಜುರನ್ನು ಆ ಪರಿ ಗೋಳಾಡಿಸಿದರು ಎಂಬುದು ಗಾಂಧಿನಗರಿಗರ ಪ್ರಶ್ನೆ. ಮಂಜು ಮಾತನಾಡುವ ಕನ್ನಡ ತಪ್ಪು ಎಂಬುವುದಕ್ಕಿಂತ ಸ್ನೇಹಿತರಾಗಿದ್ದ ಇವರಿಬ್ಬರ ಕಿತ್ತಾಟವೇ ದೊಡ್ಡ ಕಾಮಿಡಿ ಎನ್ನುತ್ತಿದೆ ಗಾಂಧಿನಗರ.

No comments:

Post a Comment