Pages

Sunday, May 6, 2012

ಕಥೆ ವಿವಾದಕ್ಕೆ ನಟ ಉಪೇಂದ್ರ ಹೇಳಿದ್ದೇನು ಗೊತ್ತೇ?

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಜೋಡಿಯ 'ಕಠಾರಿವೀರ ಸುರಸುಂದರಾಂಗಿ' ಚಿತ್ರಕ್ಕೂ, ವಿವಾದಕ್ಕೂ ಮಹಾ ನಂಟು ಎಂಬಂತಾಗಿದೆ. ಅತ್ತ ಈ ಚಿತ್ರದ ವಿವಾದಕ್ಕೆ ಮುನ್ನುಡಿ ಬರೆದಿದ್ದ ಗಾಡ್ ಫಾದರ್ ನಿರ್ಮಾಪಕ ಕೆ ಮಂಜು ತಮ್ಮ ಚಿತ್ರವನ್ನು ಜೂನ್ 8 ಅಥವಾ 15ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿ ಕಠಾರವೀರಕ್ಕೆ ದಾರಿ ಸುಗಮ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲ, ವಿವಾದಕ್ಕೂ ಅಂತ್ಯ ಹಾಡಿದ್ದರು.

ಆದರೆ ಕಠಾರಿವೀರಕ್ಕೆ ಇದೀಗ ಎದುರಾಗಿರುವ ಮತ್ತೊಂದು ವಿಘ್ನಕ್ಕೆ ಪರಿಹಾರ ನಾಡಿದ್ದು ಮಂಗಳವಾರ ಅಂದರೆ ಮೇ 8, 2012 ಕ್ಕೆ ದೊರೆಬಹುದೇನೋ ಎಂಬಂತಾಗಿದೆ. ನಿರಂಜನ ಶೆಟ್ಟಿ ಎಂಬ ನಟ ಹಾಗೂ ಲೇಖಕ ಕಠಾರಿವೀರದ ಕಥೆ ತನ್ನದೆಂದು ಆಪಾದಿಸಿ ಕೋರ್ಟ್ ಮೆಟ್ಟಿಲೇರಿದ್ದು ಎಲ್ಲರಿಗೂ ಗೊತ್ತು. ಈ ಸಂಬಂಧ ನಟ ಉಪೇಂದ್ರ, ರಾಕ್ ಲೈನ್ ಪ್ರೊಡಕ್ಷನ್ಸ್ ಹಾಗೂ ಮುನಿರತ್ನ ಅವರಿಗೆ ಕೋರ್ಟ್ ನೋಟಿಸ್ ನೀಡಿದೆ.

ಇದಕ್ಕೆ ಉಪೇಂದ್ರ "ಹದಿನೈದು ವರ್ಷಗಳ ಹಿಂದೆ ನಿರಂಜನ ಶೆಟ್ಟಿ ನನ್ನ ಬಳಿ ಬಂದಿದ್ದರಂತೆ. ಈ ರೀತಿ ಅದೆಷ್ಟೋ ಜನ ಬರ್ತಾ ಇರ್ತಾರೆ. ಅವರೆಲ್ಲರನ್ನೂ ನೆನಪಿನಲ್ಲಿಟ್ಟುಕೊಳ್ಳಲು ಆಗುತ್ತಾ? ಅಷ್ಟಕ್ಕೂ ಈ ರೀತಿಯ ಸಿನಿಮಾಗಳು ಸಾಕಷ್ಟು ಬಂದಿವೆ. ಕಠಾರಿವೀರ ಅವರದೇ ಕಥೆ ಎನ್ನುವುದಕ್ಕೆ ಸಾಕ್ಷಿ ಏನಿದೆ? ಸಾಕ್ಷಿ ಇದ್ದರೆ ಅವುಗಳ ಸಮೇತ ಬರಲಿ, ಸಾಮ್ಯತೆ ಇದ್ದರೆ ನೋಡೋಣ. ಆದರೆ ಪ್ರಚಾರಕ್ಕಾಗಿ ಈ ರೀತಿ ಮಾಡಬಾರದು" ಎಂದಿದ್ದಾರೆ

No comments:

Post a Comment