Pages

Thursday, April 19, 2012

Upendra fails to broker peace between Munirathna-K Manju

ಕಠಾರಿವೀರ ಮತ್ತು ಗಾಡ್‌ಫಾದರ್ ಚಿತ್ರಗಳ ಬಿಡುಗಡೆ ವಿವಾದ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಕೆ.ಮಂಜು ಹಾಗೂ ಮುನಿರತ್ನ ಇಬ್ಬರೂ ನಿರ್ಮಾಪಕರ ನಡುವಿನ ಹಗ್ಗ ಜಗ್ಗಾಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಗುರುವಾರ (ಏ.19) ರಿಯಲ್ ಸ್ಟಾರ್ ಉಪೇಂದ್ರ ಅವರ ಕತ್ರಿಗುಪ್ಪೆ ಮನೆಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.

ಮಂಜು ಮತ್ತು ಮುನಿರತ್ನ ಇಬ್ಬರೂ ಜಿದ್ದಿಗೆ ಬಿದ್ದಿದ್ದಾರೆ. ನೀ ಕೊಡೆ ನಾ ಬಿಡೆ ಎಂಬಂತೆ ಇಬ್ಬರೂ ಬಿಗಿ ಪಟ್ಟುಹಿಡಿದಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಇದ್ದ ಎಲ್ಲ ದಾರಿಗಳು ಬಂದ್ ಆಗಿವೆ. ಈಗ ಅವರಿಗೆ ಗೋಚರಿಸುತ್ತಿರುವ ಒಂದೇ ಒಂದು ದಾರಿ ರೆಬಲ್ ಸ್ಟಾರ್ ಅಂಬರೀಷ್ ಅವರ ಮನೆಗೆ ದಾರಿ.

ಗುರುವಾರ ನಡೆದ ಸಂಧಾನ ಸಭೆಯಲ್ಲಿ ಇಬ್ಬರೂ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಇಬ್ಬರು ನಿರ್ಮಾಪಕರೊಂದಿಗೂ ಉಪೇಂದ್ರ ಪ್ರತ್ಯೇಕವಾಗಿ ಚರ್ಚಿಸಿದರಾದರೂ ಸಮಸ್ಯೆ ಬಗೆಹರಿಯಲಿಲ್ಲ. ಇಬ್ಬರೂ ನಿರ್ಮಾಪಕರು ಅಲ್ಲಿಂದ ಎದ್ದು ಬಂದಿದ್ದಾರೆ. ಈಗ ಚೆಂಡು ಅಂಬರೀಷ್ ಮನೆಗೆ ಬಂದು ಬೀಳಲಿದೆ. ಮುಂದೇನಾಗುತ್ತದೋ ಎಂಬ ಕುತೂಹಲ ನಿಮ್ಮಂತೆಯೇ ನಮಗೂ ಇದೆ.

Real Star Upendra, who has returned from his Europe vacation this morning, is mediating between the warring producers K Munirathna and K Manju, who have been fighting over their movie releases for the past few weeks. It has become a headache for the actor, as the producers want to release their movies Katari Veera Surasundarangi and Godfather – both starring Uppi – first.

The meeting has begun at Upendra's residence 'Summane' at noon along with Munirathna and K Manju. If the early talks are anything to go by, the Real Star has failed to broker peace between the producers, as there are adamant on their stand. After failing to convince in an open meeting, the actor is now having individual talks with both the filmmakers. However, the issue is expected to be resolved by this evening.

The controversy broke out after Munirathna announced the release date of his Katari Veera Surasundarangi (KVS). K Manju, who has been silent all these days, came out claiming that his Godfather should be released first, as it hit the floors a year ago. Later, the Karnataka Film Chamber of Commerce (KFCC) and actor Ambareesh's attempt to bring peace between the parties did not yield any result.

No comments:

Post a Comment