Pages

Monday, April 9, 2012

ಅಣ್ಣಾ ಬಾಂಡ್ ಜತೆ ಪೈಪೋಟಿಗೆ ಕಠಾರಿವೀರ ಬ್ರೇಕ್

Upendra Ramya
 ಕಠಾರಿವೀರ ಸುರಸುಂದರಾಂಗಿ ಚಿತ್ರದ ಬಿಡುಗಡೆ ಒಂದು ವಾರ ಮುಂದಕ್ಕೆ ಹೋಗಿದೆ. ಅಂದರೆ ಮೇ 3, 2012 ಕ್ಕೆ ಉಪೇಂದ್ರ ಕಠಾರಿವೀರ ತೆರೆಗೆ ಬರಲಿದೆ. ತಮ್ಮ ಚಿತ್ರ ಗಾಡ್ ಫಾದರ್, ಮುನಿರತ್ನರ ಕಠಾರಿವೀರನಿಗಿಂತ ಮೊದಲು ಬರಬಾರೆಂದೆಂಬ ನಿರ್ಮಾಪಕ ಕೆ ಮಂಜು ವಿಚಿತ್ರ ವಾದಕ್ಕೆ ಬಲಿಯಾಗಿ ಕಠಾರಿವೀರ ಚಿತ್ರ ಒಂದು ವಾರದ ನಂತರ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ.

ಈ ಕುರಿತು ಫಿಲ್ಮ್ ಚೇಂಬರ್ ಗೆ ದೂರು ನೀಡಿದ ಕೆ ಮಂಜು ಕಠಾರಿವೀರ ಬಿಡುಗಡೆಗೆ ಅಡ್ಡಗಾಲು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಗಾಡ್ ಫಾದರ್, ಕಠಾರಿವೀರ ಚಿತ್ರಕ್ಕಿಂತ ಮೊದಲು ಮಹೂರ್ತ ಆಚರಿಸಿಕೊಂಡಿದೆ ಎಂಬ ವಾದವನ್ನು ಮುಂದಿಟ್ಟಿದ್ದ ಕೆ ಮಂಜು, ತಮ್ಮ ಚಿತ್ರವನ್ನು ಯಾವಾಗ ಬಿಡುಗಡೆ ಮಾಡಲಿದ್ದಾರೆ ಎಂಬುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಕಠಾರಿವೀರ ಮಾತ್ರ ಬಿಡುಗಡೆ ದಿನಾಂಕವನ್ನು ಮತ್ತೆ ಪಕ್ಕಾ ಮಾಡಿದೆ.

ನಿರ್ಮಾಪಕರಿಬ್ಬರೂ ಕಿತ್ತಾಡುತ್ತಿರುವ ಚಿತ್ರಗಳೆರಡಕ್ಕೂ ಹೀರೋ ಉಪೇಂದ್ರರೇ. ಉಪೇಂದ್ರ ಅಭಿಮಾನಿಗಳೀಗ ವಿಚಿತ್ರ ತೊಳಲಾಟ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ನಿರ್ಮಾಪಕರ ಚಿತ್ರವೆಂಬುದು ಮುಖ್ಯವಲ್ಲ, ಆದರೆ ಎರಡೂ ಚಿತ್ರಗಳೂ ಒಂದೇ ದಿನ ಬಿಡುಗಡೆ ಆಗದಿದ್ದರೆ ಸಾಕು ಎಂದು ದೇವರಿಗೆ ಹರಕೆ ಹೊತ್ತಿದ್ದಾರೆ. ಈ ವಿಷಯವೀಗ ಗಾಂಧಿನಗರದ ಗಲ್ಲಿಯಲ್ಲಿ ಸುತ್ತಾಡುತ್ತಿದೆ.


No comments:

Post a Comment