Pages

Tuesday, April 10, 2012

ಎಪ್ರಿಲ್ 27 ಕ್ಕೆ 'ಕಠಾರಿವೀರ' ತೆರೆಗೆ : ಮುನಿರತ್ನ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಚಿತ್ರಗಳಾಗಿರುವ 'ಗಾಡ್ ಫಾದರ್' ಹಾಗೂ 'ಕಠಾರಿವೀರ ಸುರ ಸುಂದರರಾಂಗಿ' ಚಿತ್ರಗಳೂ ತೆರೆಗೆ ಬರಲು ನಾಮುಂದು ತಾಮುಂದು ಅನ್ನುತ್ತಿವೆ. 'ಗಾಡ್ ಫಾದರ್' ಚಿತ್ರದ ನಿರ್ಮಾಪಕರಾಗಿರುವ ಕೆ.ಮಂಜು ಇದೇ ತಿಂಗಳು ಚಿತ್ರ ಬಿಡುಗಡೆ ಮಾಡುತ್ತೀನಿ ಎಂದು ಪಟ್ಟು ಹಿಡಿದ್ದಿದ್ದರೆ ಮತ್ತೊಂದೆಡೆ 'ಕಠಾರಿವೀರ ಚಿತ್ರದ ನಿರ್ಮಾಪಕರಾಗಿರುವ ಮುನಿರತ್ನ ಚಿತ್ರ ಬಿಡುಗಡೆಯ ದಿನಾಂಕವನ್ನು ನಿನ್ನೆ (ಮಾರ್ಚ್ 9) ಘೋಷಿಸಿದರು.
ಇದೇ ತಿಂಗಳು ೨೭ ಕ್ಕೆ 'ಕಠಾರಿವೀರ ಸುರ ಸುಂದರಾಂಗಿ' ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಆಡಿಯೋ ಇದೇ ಬರುವ ೧೬ ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಮುನಿರತ್ನ ತಿಳಿಸಿದರು. ಕನ್ನಡದ ಮೊಟ್ಟ ಮೊದಲ ೩ಡಿ ಚಿತ್ರ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ 'ಕಠಾರಿವೀರ' ನ ಸುರ ಸುಂದರಾಂಗಿಯಾಗಿ ಮೋಹಕ ತಾರೆ 'ರಮ್ಯ' ಅಭಿನಯಿಸಿದ್ದಾರೆ.
ಕನ್ನಡದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಅಣ್ಣಾ ಬಾಂಡ್' ಕೂಡ ಬಿಡುಗಡೆಯಾಗುತ್ತಿದ್ದು, 'ಕಠಾರಿವೀರ' ನಿಗೆ ಪೈಪೋಟಿ ನೀಡಲಿದೆ.

No comments:

Post a Comment