Pages

Tuesday, April 17, 2012

ಕಠಾರಿವೀರ 140 ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಭಾರಿ ಬಜೆಟ್ ಚಿತ್ರ 'ಕಠಾರಿವೀರ ಸುರ ಸುಂದರಾಂಗಿ' ಚಿತ್ರ 2D ಮತ್ತು 3D ಎರಡೂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ 2D ಆವೃತ್ತಿಯು ಒಟ್ಟು 140 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.

'ಕಠಾರಿವೀರ' ಚಿತ್ರ ಏ.24ರಂದು ಸೆನ್ಸಾರ್ ಮುಂದೆ ಬರಲಿದೆ. ಇನ್ನು 2D ಆವೃತ್ತಿ ಏ.20ರಂದೇ ಸೆನ್ಸಾರ್‌ಗೆ ಹೋಗಲಿದೆ ಎಂದು ನಿರ್ಮಾಪರು ತಿಳಿಸಿದ್ದಾರೆ. ಕಠಾರಿವೀರ ಚಿತ್ರ ಏ.27, 2012ರಂದು ತೆರೆಗೆ ಅಪ್ಪಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ ನಿರ್ಮಾಪರು.

'ಗಾಡ್ ಫಾದರ್' ಚಿತ್ರವನ್ನು 'ಕಠಾರಿವೀರ' ಚಿತ್ರ ಬಿಡುಗಡೆಯಾಗುವ ದಿನವೇ ರಿಲೀಸ್ ಮಾಡುವುದಾಗಿ ಕೆ.ಮಂಜು ಪಟ್ಟುಹಿಡಿದಿದ್ದರು. ಮೊದಲು ಯಾರ ಚಿತ್ರ ಸೆನ್ಸಾರ್ ಆಗುತ್ತದೋ ಆ ಚಿತ್ರವೇ ಮೊದಲು ಬಿಡುಗಡೆಯಾಗಲಿ ಎಂದು ಫಿಲಂ ಚೇಂಬರ್ ತೀರ್ಪು ನೀಡಿ ವಿವಾದಕ್ಕೆ ತೆರೆ ಎಳೆದಿತ್ತು

No comments:

Post a Comment