Pages

Wednesday, March 28, 2012

ಶಿವ ಸೂಪರ್, ನಾನೂ ಶಿವಣ್ಣ ಫ್ಯಾನು: ಉಪೇಂದ್ರ

ಶಿವ ಒಂದು ಕಣ್ಣು ತೆರೆದರೆ ಕ್ಲಾಸ್, ಇನ್ನೊಂದು ಕಣ್ಣು ತೆರೆದರೆ ಮಾಸ್, ಮೂರನೇ ಕಣ್ಣು ತೆರೆದರೆ ಖಲಾಸ್ -- ಇದು 'ಶಿವ' ಚಿತ್ರದ ಆಕರ್ಷಕ ಡೈಲಾಗ್. ಹಲವು ಅಂಶಗಳಿಂದ ಗಮನ ಸೆಳೆಯುತ್ತಿರುವ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ, ತಾನು ಶಿವಣ್ಣನ ದೊಡ್ಡ ಅಭಿಮಾನಿ ಎಂದು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಸೆಂಚುರಿ ಹೀರೋ ಶಿವರಾಜ್ ಕುಮಾರ್ ನಾಯಕನಾಗಿರುವ 'ಶಿವ' ಮೇ 18ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.

ಇತ್ತೀಚೆಗಷ್ಟೇ ಉಪೇಂದ್ರ 'ಶಿವ' ಚಿತ್ರದ ಕೆಲವು ವಿಡಿಯೋ ಕ್ಲಿಪ್‌ಗಳನ್ನು ನೋಡಿದ್ದರು. ಅವರೂ ಒಬ್ಬ ನಿರ್ದೇಶಕರಾಗಿರುವುದರಿಂದ, ಚಿತ್ರ ಹೇಗಿದೆ ಅನ್ನೋದು ಅಷ್ಟರಲ್ಲೇ ಗೊತ್ತಾಗಿತ್ತು. ಈ ಬಗ್ಗೆ ಮಾತನಾಡಿರುವ ಅವರು, ನಾನು ಶಿವರಾಜ್ ಕುಮಾರ್ ಅವರ ದೊಡ್ಡ ಫ್ಯಾನ್. ಅವರಿಗೆ ಕೊಟ್ಟ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ನ್ಯಾಯ ಸಲ್ಲಿಸಿದ್ದಾರೆ ಎಂದಿದ್ದಾರೆ.

No comments:

Post a Comment