Pages

Monday, February 27, 2012

ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರ ಡಬ್ಬ ಸೇರಿತೆ?



ಆರಕ್ಷಕ' ಚಿತ್ರ ಡಬ್ಬ ಸೇರಿತೆ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಹುಟ್ಟಿ ಹಲವು ದಿನಗಳೇ ಕಳೆದಿವೆ. ಹ್ಯಾಟ್ರಿಕ್ ನಿರ್ದೇಶಕರಾಗಲು ಹೊರಟ ಪಿ.ವಾಸು ತುಂಬಾ ಶ್ರದ್ಧೆಯಿಂದ 'ಆರಕ್ಷಕ'ನನ್ನು ಮಾಡಿದ್ದರು. ಜನವರಿ 26ರಂದು ಸಾಗರ್ ಚಿತ್ರಮಂದಿರದಲ್ಲಿ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು.

ಆದರೆ ಎರಡು ದಿನಗಳ ನಂತರ ಸಿನಿಮಾದಲ್ಲಿ ಗೊಂದಲಗಳು ಜಾಸ್ತಿ ಇವೆ. ತಕ್ಷಣ ಅರ್ಥವಾಗುವುದಿಲ್ಲ ಎಂದು ಕೆಲವು ಪ್ರೇಕ್ಷಕರು ಮೂಗು ಮುರಿದರು. ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಂತೂ ಪಂಚಿಗ್ ಡೈಲಾಗ್ ಇಲ್ಲ. ಇದು ಉಪೇಂದ್ರ ಸಿನಿಮಾವೇ ಅಲ್ಲ ಎಂದರು. ಬಿಡುಗಡೆಯಾದ ನಾಲ್ಕನೇ ವಾರಕ್ಕೆ ಆರಕ್ಷಕ ಚಿತ್ರಮಂದಿರದಿಂದ ಎತ್ತಂಗಡಿಯಾಗಿ ಅಲ್ಲಿಗೆ 'ಲಕ್ಕಿ' ಬಂದು ಕುಳಿತಿದೆ.

ಆರಕ್ಷಕ ಚಿತ್ರದ ರಿಚ್‌ನೆಸ್, ಉಪೇಂದ್ರ ಅಭಿನಯ ಎಲ್ಲದಕ್ಕೂ ಪ್ರೇಕ್ಷಕರು ಫುಲ್ ಮಾರ್ಕ್ಸ ನೀಡಿದ್ದರು. ಆದರೆ ಚಿತ್ರಕಥೆ, ಹಾಡುಗಳು ಜನರಿಗೆ ಇಷ್ಟವಾಗಲಿಲ್ಲ. ಅಂತೂ ಮತ್ತೊಂದು 'ಅ'ಕಾರ ಬರೆಯಲು ಹೊರಟಿದ್ದ ನಿರ್ದೇಶಕ ಪಿ.ವಾಸು ಅವರಿಗೆ ಇದರಿಂದ ಸ್ವಲ್ಪ ಹಿನ್ನಡೆಯಂತೂ ಆಗಿದೆ

No comments:

Post a Comment