Pages

Monday, February 6, 2012

ಬಾಕ್ಸಾಫೀಸಲ್ಲಿ ಉಪೇಂದ್ರ 'ಆರಕ್ಷಕ' ಜಿಂಗಿಚಕ್ಕ ಡ್ಯಾನ್ಸ್

ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪಿ ವಾಸು ಕಾಂಬಿನೇಷನ್ ಚಿತ್ರ 'ಆರಕ್ಷಕ' ಬಾಕ್ಸಾಫೀಸಲ್ಲಿ ಜಿಂಗಿಚಕ್ಕ ಎಂದು ಕುಣಿದು ಕುಪ್ಪಳಿಸಿದೆ. ಚಿತ್ರ ಬಿಡುಗಡೆಯಾದ ಎಂಟು ದಿನಗಳಲ್ಲಿ ಒಟ್ಟು ರು.3.42 ಕೋಟಿ ಕಲೆಕ್ಷನ್ ಮಾಡಿದ್ದು ಇದರಲ್ಲಿ ರು.2.5 ಕೋಟಿ ನಿರ್ಮಾಪಕರ ಪಾಲು ಎಂದು ಚಿತ್ರ ವಿತರಕ ಬಾಷಾ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಉಪೇಂದ್ರ, ನಿರ್ದೇಶಕ ಪಿ ವಾಸು, ನಿರ್ಮಾಪಕ ಕೃಷ್ಣ ಪ್ರಜ್ವಲ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಉಪಸ್ಥಿತರಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಚಿಂಗಾರಿ' ಚಿತ್ರ ಬಿಡುಗಡೆಯಾದ ಕಾರಣ ಕೆಲವು ಚಿತ್ರಮಂದಿರಗಳನ್ನು ಬಿಟ್ಟುಕೊಡಬೇಕಾಯಿತು. ಹಾಗಾಗಿ 'ಆರಕ್ಷಕ' ಚಿತ್ರ ಸದ್ಯಕ್ಕೆ 65 ಪ್ಲಸ್ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು. ಅಂದಹಾಗೆ 'ಚಿಂಗಾರಿ' ಚಿತ್ರವೂ ಕಲೆಕ್ಷನ್‌ನಲ್ಲಿ ಮುನ್ನುಗ್ಗುತ್ತಿರುವುದು ಗೊತ್ತೇ ಇದೆ

No comments:

Post a Comment