Pages

Wednesday, January 25, 2012

A ಬಿಡುಗಡೆಯಾಗಿದ್ದ ದಿನವೇ ಆರಕ್ಷಕ, ಏನಿದರ ಒಳಗುಟ್ಟು



ನಾಳೆ ರಾಯರದಿನದಂದು ( ಜ 26) ಉಪೇಂದ್ರ ಅವರ ಬಹು ನಿರೀಕ್ಷಿತ ಆರಕ್ಷಕ ಚಿತ್ರ ಬಿಡುಗಡೆಗೊಳ್ಳುತ್ತಿದೆ . ಸರಿಯಾಗಿ 14 ವರ್ಷಗಳ ಹಿಂದೆ ಅಂದರೆ ಜನವರಿ 26 ,1998 ರಂದು ಉಪೇಂದ್ರ ನಿರ್ದೇಶಿಸಿ, ನಾಯಕ ನಟನಾಗಿ ನಟಿಸಿದ್ದ 'A " ಚಿತ್ರ ಬಿಡುಗಡೆ ಗೊಂಡಿತ್ತು. ಈಗ A ಬಿಡುಗಡೆ ಆಗಿದ್ದ ದಿನದಂದೇ ಅಂದರೆ ನಾಳೆ ಜನವರಿ 26 ರಂದು ಆರಕ್ಷಕ ಚಿತ್ರ ಬಿಡುಗಡೆಗೊಳ್ಳುತ್ತಿದೆ.

ಉಪೇಂದ್ರ ಅವರು ನಿರ್ದೇಶಕರಾಗಿ ಕೆಲಸ ಮಾಡಿದ ಐದನೇ ಚಿತ್ರ "A ". ಚಿತ್ರದ ಕಥೆ ಮತ್ತು ಚಿತ್ರಕಥೆ ಪ್ರೇಕ್ಷಕ ಮಹಾಪ್ರಭುಗಳಿಗೆ ಆರ್ಥಾವಾಗಿತ್ತೋ ಇಲ್ವೋ ಚಿತ್ರ ಮಾತ್ರ ಬ್ಲಾಕ್ ಬಸ್ಟರ್ ಕೆಟಗರಿಗೆ ಸೇರಿತ್ತು. 1.3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಗಳಿಸಿದ್ದು ಹೆಚ್ಚು ಕಮ್ಮಿ 20 ಕೋಟಿ. ಈ ಚಿತ್ರ ಗುರುಕಿರಣ್ ಅವರಿಗೆ ಚೊಚ್ಚಲ ಸಂಗೀತ ನಿರ್ದೇಶನದ ಚಿತ್ರ ಕೂಡಾ.

ಜನವರಿ 26 ರಂದೇ A ಮತ್ತು ಆರಕ್ಷಕ ಚಿತ್ರ ಬಿಡುಗಡೆ ಗೊಳ್ಳುತ್ತಿರುವುದು ಕಾಕತಾಳೀಯವೋ ಅಥವಾ ಮುಂದಾಲೋಚನೆಯೋ ತಿಳಿಯದು. ಆದರೆ ಉಪ್ಪಿ ಅಭಿಮಾನಿಗಳು ಮಾತ್ರ ಈ ಚಿತ್ರ ಇನ್ನೊಂದು A ಚಿತ್ರವಾಗಲಿ ಎಂದು ಆಶಿಸುತ್ತಿದ್ದಾರೆ. ತನ್ನ ಚಿತ್ರ ವಿಚಿತ್ರ ಗೆಟ್ ಅಪ್ ನಿಂದ ಮನೆಮಾತಾಗಿರುವ ಉಪೇಂದ್ರ ಆರಕ್ಷಕ ಚಿತ್ರದಲ್ಲಿ ಖಾಕಿದಾರಿಯಾಗಿರುವುದು ಕುತೂಹಲ ಮೂಡಿಸಿದೆ.

ಸುಮಾರು 70ಕ್ಕೂ ಚಿತ್ರಮಂದಿರಗಳಲ್ಲಿ ಆರಕ್ಷಕ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಪರಭಾಷೆ ಚಿತ್ರಗಳ ವಿಪರಿಮೀತ ಹಾವಳಿಗಳ ನಡುವೆಯೂ ಗರಿಗೆದರುತ್ತಿರುವ ಕನ್ನಡ ಚಿತ್ರರಂಗದ ಪಾಲಿಗೆ ಈ ಚಿತ್ರ ಇನ್ನೊಂದು ಯಶಸ್ಸಿನ ಚಿತ್ರ ಆಗಲಿ ಎನ್ನುವುದು ಉಪ್ಪಿ ಅಭಿಮಾನಿಗಳ ಆಶಯ

No comments:

Post a Comment