Pages

Monday, January 23, 2012

ಆರಕ್ಷಕದಲ್ಲಿ ಉಪೇಂದ್ರ ಮಾನಸಿಕ ರೋಗಿಯೇ?


Upendra Arakshaka Image 

ಇದೇ ಗುರುವಾರ, 26 ಜನವರಿ 2012ರಂದು ರಾಜ್ಯಾದ್ಯಂತ ತೆರೆಕಾಣಲಿರುವ ಆರಕ್ಷಕ ಚಿತ್ರದ ಪೋಸ್ಟರ್ ಗಳು ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರಣ ಸೂಪರ್ ಸ್ಟಾರ್ ಉಪೆಂದ್ರ ಇಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿರವುದು ಒಂದು. ಹುಚ್ಚನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು.

ಉಪೇಂದ್ರ ಈ ಚಿತ್ರದಲ್ಲಿ ಮಾನಸಿಕ ರೋಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಪ್ರೇಕ್ಷಕರ ತಲೆಯೊಳಗೆ ಸುತ್ತುತ್ತಿದೆ. ಕಾರಣ ಮತ್ತದೇ ಪೋಸ್ಟರ್. ಅಂದರೆ ಆಪ್ತಮಿತ್ರದ ಸೌಂದರ್ಯ ಅವರಂತೆ ಉಪ್ಪಿ ವಿಶಿಷ್ಠ ಪಾತ್ರ ಪೋಷಿಸಿರಬಹುದು, ಕಥೆಯೂ ರೋಚಕವಾಗಿರಬಹುದು ಎನ್ನಲಾಗುತ್ತಿದೆ.

ನಿರ್ದೆಶಕ ಪಿ ವಾಸು ಅವರನ್ನು ಕೇಳಿದರೆ ಹೆಚ್ಚು ಮಾತನಾಡದೇ ಉಪ್ಪಿ ಕಡೆ ಕೈ ತೋರಿಸುತ್ತಾರೆ. ಉಪೇಂದ್ರ ಮಾತನ್ನೇ ಆಡದೇ ನಗುತ್ತಾ ಚಿತ್ರ ನೋಡಿ ಎಂದು ಕಾಗೆ ಹಾರಿಸಿದ್ದಾರೆ. ಪ್ರೇಕ್ಷಕರಿಗೆ ಮಾತ್ರ ಚಿತ್ರ ಬಿಡುಗಡೆಗಿಂತ ಮೊದಲೇ ತಿಳಿದುಕೊಳ್ಳುವ ಹಂಬಲ. ಆದರೆ ಗುಟ್ಟು ರಟ್ಟಾಗುತ್ತಿಲ್ಲ, ಜನ ಬಿಡುತ್ತಿಲ್ಲ.

ಚಿತ್ರದ ಬಗ್ಗೆ ಆಪಾರ ನಿರೀಕ್ಷೆ ಮೂಡಲು ಇನ್ನೊಂದು ಕಾರಣವಿದೆ. ಅದು ನಿರ್ದೇಶಕ ಪಿ ವಾಸು. ಅವರು ಈ ಮೊದಲು ನಿರ್ದೆಶಿಸಿದ್ದ ಆಪ್ತಮಿತ್ರ, ಆಪ್ತರಕ್ಷಕದ ನಂತರ ನಿರ್ದೇಶಿಸುತ್ತಿರುವ ಚಿತ್ರ ಆರಕ್ಷಕ. ಹೆಸರಿನಲ್ಲೂ ಕೂಡ 'ಆ' ಕಾಪಾಡಿಕೊಂಡು ಬಂದಿರುವ ವಾಸು ಆಪ್ತ ರಕ್ಷಕದ ನಂತರ ಮತ್ತೆ 'ರಕ್ಷಕ' ಶಬ್ಧಕ್ಕೂ ಮೊರೆ ಹೋಗಿದ್ದಾರೆ.

ವಾಸು ನಿರ್ದೆಶನದ ಆ ಎರಡು ಚಿತ್ರಗಳು ಹಿಟ್ ಆಗಿರುವುದರಿಂದ ಇದಕ್ಕೆ ಅಪಾರ ನಿರೀಕ್ಷೆ ವ್ಯಕ್ತವಾಗಿದೆ. ಜೊತೆಗೆ ಆಪ್ತ ರಕ್ಷಕ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮತ್ತೆ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಸೂಪರ್ ನಂತರ ಹಾಗೆ ಬಂದು ಹೀಗೆ ಹೋದ 'ಶ್ರೀಮತಿ' ಚಿತ್ರ ಬಿಟ್ಟರೆ ಉಪ್ಪಿ ಚಿತ್ರವೂ ಬಂದಿಲ್ಲ. ಎಲ್ಲಾ ಸೇರಿ ಆರಕ್ಷಕಕ್ಕೆ ನಿರೀಕ್ಷೆಯ ಮಹಾಪೂರ.

ಆರಕ್ಷಕದಲ್ಲಿ ಉಪಂದ್ರಗೆ ನಾಯಕಿಯರಾಗಿ ಒಬ್ಬಾಕೆ ರಾಣಿ ರಾಗಿಣಿ ಹಾಗೂ ಸದಾ ಜೊತೆಯಾಗಿದ್ದಾರೆ. ಆಪ್ತಮಿತ್ರ ಯಶಸ್ವಿ ಸಂಗೀತ ನಿರ್ದೇಶಕ ಗುರುಕಿರಣ್ ಇದ್ದಾರೆ. ಮಿಕ್ಕಂತೆ ಹೊಸ ಚಿತ್ರತಂಡ ಆರಕ್ಷಕದಲ್ಲಿದೆ. ಉಪ್ಪಿಗೆ ಹೊಸ ಗೆಟಪ್ ಹಾಗೂ ದ್ವಿಪಾತ್ರ ಇರುವ ಆರಕ್ಷಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪ್ಪಿ ಅಭಿಮಾನಿಗಳಿಗೆ ಹಬ್ಬದೂಟ ಕಾದಿದೆ.

English version


With less than 72 hours for its release, the looks of Upendra in Aarakshaka have generated a new speculation about his roles. Well, rumours mills claim that the Real Star will be seen in dual roles in the upcoming movie directed by P Vasu.

If sources are to be believed, Upendra has portrayed the role of a cop as well as a psychopath in Aarakshaka. Some of the posters also give an indication about the dual nature of his characters in the movie. However, both Uppi and P Vasu have not confirmed the news.

It may be recalled that Upendra was seen earlier in two roles in Superstar. Later, he performed triple roles in Hollywood. However, both the movies failed to be commercial hits.

Meanwhile, Aarakshaka is ready to hit the screeens on January 27. The movie also features Ragini Dwivedi and Sadha in the female lead roles

No comments:

Post a Comment