Pages

Thursday, January 19, 2012

ಉಪೇಂದ್ರ, ಮಾಜಿ ಡಾನ್ ಮುತ್ತಪ್ಪ ರೈ ಜುಗಲ್ ಬಂದಿ



ಸೂಪರ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ತಾರಾಗಣದ "ಕಠಾರಿವೀರ ಸುರಸುಂದರಾಂಗಿ" ಅದ್ದೂರಿ ಚಿತ್ರಕ್ಕೆ ಹಿಂದೊಮ್ಮೆ ರಿಯಲ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಆಗಮನವಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಒಬ್ಬ ಡಾನ್ ಹಾಗೂ ಮುತ್ತಪ್ಪ ರೈ ಇನ್ನೊಬ್ಬ ಡಾನ್. ಹೀಗೆ ರಿಯಲ್ ಸ್ಟಾರ್ ಉಪ್ಪಿ ಚಿತ್ರದ ರೀಲ್ ನಲ್ಲಿ ಮಾಜಿ ರಿಯಲ್ ಡಾನ್ ಡಿಂಗ್ ಡಾಂಗ್.

ಅದ್ದೂರಿ ತಾರಾಗಣದ ಈ ಚಿತ್ರದಲ್ಲಿ ಮಾಜಿ ರಿಯಲ್ ಡಾನ್ ಮುತ್ತಪ್ಪ ರೈ ಕನ್ನಡದಲ್ಲಿ ಮೊದಲ ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಬೆಳ್ಳಿತೆರೆಗೆ ಈ ಮೊದಲು ತುಳು ಚಿತ್ರ 'ಕಂಚಿಲ್ದ ಬಾಲೆ' ಮೂಲಕ ಪ್ರವೇಶಿಸಿದ್ದರು. ಡಾನ್ ಪಾತ್ರದಲ್ಲೇ ತೆರೆಯಮೇಲೆ ಮಿಂಚಲಿರುವ ರೈ ಸಂಭಾಷಣೆ ಹೇಳಿರುವ ರೀತಿ ತುಂಬಾ ಚೆನ್ನಾಗಿದೆಯಂತೆ. ಒಂದು ಕಾಲದಲ್ಲಿ ಭೂಗತಲೋಕವನ್ನು ಆಳಿದ್ದ ರೈ, ನಂತರ ಅದರಿಂದ ಬೇಸತ್ತು ಮುಖ್ಯವಾಹಿನಿಗೆ ಮರಳಿದವರು.

ದಕ್ಷಿಣ ಭಾರತದ ಖ್ಯಾತ ನಿರ್ದೆಶಕ ಸುರೇಶ್ ಕೃಷ್ಣ ನಿರ್ದೆಶನದ ಈ ಚಿತ್ರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ನಿರ್ಮಿಸಿದ್ದಾರೆ. ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಮುತ್ತಪ್ಪ ರೈ ಜುಗಲ್ ಬಂದಿ ಚಿತ್ರಕ್ಕೆ ಇನ್ನೂ ಹೆಚ್ಚು ನಿರೀಕ್ಷೆ ಮೂಡಿಸಿದೆ.

ಚಿತ್ರದಲ್ಲಿ ಸುಂದರಿ ರಮ್ಯಾ ದೇವಲೋಕದ ಅಪ್ಸರೆಯಾಗಿ ಕಾಣಿಸಿಕೊಂಡಿದ್ದಾರೆ. ಯಮನ ಪಾತ್ರದಲ್ಲಿ ಅಂಬರೀಷ್ ಮಿಂಚಲಿದ್ದಾರೆ. ದೊಡ್ಡಣ್ಣ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಬರೋಬ್ಬರಿ ಹನ್ನೆರಡು ಕೋಟಿ ರು. ಸುರಿದಿದ್ದಾರೆ ಮುನಿರತ್ನ. ಕಾರಣ ಈ ಚಿತ್ರವನ್ನು '2D ಮತ್ತು 3D' ಯಲ್ಲಿ ನಿರ್ಮಿಸಲಾಗಿದೆ. ಚಿತ್ರೀಕರಣ ಅಂತಿಮ ಹಂತದಲ್ಲಿದೆ


No comments:

Post a Comment