Pages

Thursday, January 12, 2012

ಸೂಪರ್ ಭಾಗ 2ರ ಸಿದ್ಧತೆಯಲ್ಲಿ ರಿಯಲ್ ಸ್ಟಾರ್ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ಅಭಿನಯಿಸಿದ ಸೂಪರ್ ಚಿತ್ರ ಸೂಪರ್ ಹಿಟ್ ಆಗಿದ್ದು ಇತಿಹಾಸ. ಸುದೀರ್ಘ ಹತ್ತು ವರ್ಷಗಳ ಬಳಿಕ ಉಪ್ಪಿ ನಿರ್ದೇಶಿಸಿ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿ ಅತ್ತ ತಮಿಳು, ತೆಲುಗು ಚಿತ್ರರಂಗದ ಗಮನವನ್ನೂ ಸೆಳೆದಿತ್ತು.

ವಿಭಿನ್ನ ಕತೆಯ ಮೂಲಕ ಉಪ್ಪಿ ಪ್ರೇಕ್ಷಕರನ್ನು ರಂಜಿಸಿದ್ದರು. 2030ರ ವೇಳೆಗೆ ಭಾರತ ಸೂಪರ್ ಪವರ್ ರಾಷ್ಟ್ರವಾಗುವ ಪರಿಯನ್ನು ತಮ್ಮ ಚಿತ್ರದಲ್ಲಿ ತೋರಿಸಿದ್ದರು. ಈಗ ಸೂಪರ್ ಚಿತ್ರದ ಭಾಗ 2 ರ ಸಿದ್ಧತೆಯಲ್ಲಿ ಉಪ್ಪಿ ಇದ್ದಾರೆ ಎನ್ನುತ್ತವೆ ಮೂಲಗಳು.

ಸೂಪರ್ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದರು. ಉಪ್ಪಿ ಜೊತೆ ನಯನತಾರಾ, ಟುಲಿಪ್ ಜೋಷಿ ಅಭಿನಯಿಸಿದ್ದ ಚಿತ್ರ ಇದಾಗಿತ್ತು. ಈ ಬಾರಿಯೂ ಉಪ್ಪಿ ತಮ್ಮ ಚಿತ್ರಕ್ಕೆ ಸಿಂಬಲ್‌ನಲ್ಲೇ ಗಮನಸೆಳೆಯುತ್ತಾರೋ ಏನೋ ಕಾದುನೋಡೋಣ

No comments:

Post a Comment